ಶಿರಸಿ(Sirsi) : ತಾಲೂಕಿನ ವಿವಿಧಡೆ ಸುರಿದ ಬಾರೀ ಮಳೆಯಿಂದಾಗಿ(Heavy Rain) ಬಾರೀ ಪ್ರಮಾಣದ ಹಾನಿಯಾಗಿವೆ. ನಿರಂತರವಾಗಿ ಸುರಿದ ಮಳೆಯಿಂದ ಜನ ಕಂಗಲಾಗಿದ್ದಾರೆ.

ದೊಡ್ನಳ್ಳಿ ಗ್ರಾಮ  ಪಂಚಾಯತಿ (Dodnalli grama panchayat) ವ್ಯಾಪ್ತಿಯಲ್ಲಿ  ಹೊಲ ಗದ್ದೆ ತೋಟಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಹೊಲದಲ್ಲಿ ಬೆಳೆದು ನಿಂತಿದ್ದ ಫಸಲು ರೈತರಿಗೆ ಕೈ ಹಿಡಿಯುವ ಕಾಲಕ್ಕೆ  ಹಾಳಾಗಿದೆ.

ಮಳೆಯ ಅರ್ಭಟಕ್ಕೆ ದೊಡ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಗದ್ದೆ ಕೆರೆ(Byagadde lake) ಎರಿ ಒಡೆದು ನೀರು ಉಕ್ಕಿ ಹರಿದಿದೆ ರೈತರು ಕಂಗಾಲಾಗಿದ್ದಾರೆ. ತಾಲೂಕಿನ ನೆರೆಬೈಲ್ ಸೇತುವೆ ಮೇಲೆ ನೀರು ಉಕ್ಕಿ ಹರಿದ ಪರಿಣಾಮ ಸೇತುವೆ ಮೇಲಿರುವ ಎಳೆಂಟು ಮನೆಗಳಲ್ಲಿ ನೀರು ನುಗ್ಗಿ ಹಾನಿಯನ್ನುಂಟಾಗಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ದಾವಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ತಾಲೂಕಿನ ಲಂಡಕನಳ್ಳಿ ಹೊಳೆಯಲ್ಲಿ(Landakanahalli river) ಹೂಳು ತುಂಬಿದ ಪರಿಣಾಮ ಮಳೆಯ ನೀರು ಉಕ್ಕಿ ಹರಿದು ಇಡೀ ಪ್ರದೇಶ  ಆವರಿಸಿದೆ. ತಾಲೂಕಿನ ಗೌಡಳ್ಳಿ(Goudalli) ವ್ಯಾಪ್ತಿಯಲ್ಲಿ ಮಳೆಯ ರುದ್ರ ನರ್ತನಕ್ಕೆ ಭತ್ತದ ಗದ್ದೆಗಳ ಮೇಲೆ ನೀರು ಹರಿಯುತ್ತಿದೆ.

ಇಸಳೂರು ವ್ಯಾಪ್ತಿಯಲ್ಲಿ ರಸ್ತೆ ಬದಿಗೆ ಗಟಾರವೇ ಇಲ್ಲದ ಕಾರಣ  ಮಳೆಯ ನೀರು ಅರಣ್ಯದಿಂದ ರಸ್ತೆ ಮೇಲೆ ಹರಿಯುತ್ತಿದೆ. ಅಕಾಲಿಕ ಮಳೆಯಿಂದಾಗಿ ಶಿರಸಿ ಜನತೆ ಕಂಗಾಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಇದನ್ನು ಓದಿ : ಭಟ್ಕಳದಲ್ಲಿ ಅಪರೂಪದ ಪಥ ಸಂಚಲನ

ಹಿರಿಯ ವ್ಯಕ್ತಿಗೆ ಹೂ ಮತ್ತು ಸಿಹಿ ನೀಡಿದ ಎಸ್ಪಿ

ಶಾಂತಿ ಸಾಮರಸ್ಯ ಹಾಳು ಮಾಡುವ ಗೋವು ಕಳ್ಳರನ್ನ ಬಂಧಿಸಿ. ತಂಜಿಮ್ ಆಗ್ರಹ

ಮನೆ ಗೋಡೆ ಒಡೆದು ಅಡಿಕೆ ಕದ್ದ ಪೊಲೀಸರಿಗೆ ಸಿಕ್ಕಿ ಬಿದ್ದ