ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಬೈಕ್ ಮೂಲಕ ಅಕ್ರಮವಾಗಿ ಮದ್ಯ(Illegal Liquor) ಸಾಗಿಸುತ್ತಿದ್ದ ಆಸಾಮಿಯೊರ್ವ ಅಬಕಾರಿ ಅಧಿಕಾರಿಗಳನ್ನ ಕಂಡು ಬೈಕ್ ಬಿಟ್ಟು ಪರಾರಿಯಾದ(Escaped) ಘಟನೆ ತಾಲೂಕಿನ ಮುಡಗೇರಿ(Mudageri) ಬಳಿ ನಡೆದಿದೆ.
ಸಂದರ್ಭದಲ್ಲಿ ಒಟ್ಟು 1,14,700 ರೂ. ಮೌಲ್ಯದ ಮದ್ಯ ಮತ್ತು ವಾಹನ ಜಪ್ತಿ(Vehicle Seaz) ಮಾಡಲಾಗಿದೆ. ಮಂಗಳೂರು ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಹಾಗೂ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಕಾರವಾರ ವಲಯದ ಮಾರ್ಗ ಸಂಖ್ಯೆ 02ರಲ್ಲಿ ಗಸ್ತು ವೇಳೆ ಖಚಿತ ಬಾತ್ಮಿ ಬಂದ ಹಿನ್ನೆಲೆಯಲ್ಲಿ ಮುಡಗೇರಿ ಅರಣ್ಯ(Mudageri Forest) ರಸ್ತೆಯ ಹತ್ತಿರ ದಾಳಿ ನಡೆಸಲಾಯಿತು.
ಸಮವಸ್ತ್ರದಲ್ಲಿದ್ದ ಅಧಿಕಾರಿಗಳನ್ನು ಕಂಡ ಆರೋಪಿಯೋರ್ವ ಹೊಂಡಾ ಎಕ್ಟಿವಾ (ಕೆಎ-30/ಆರ್-4103) ಬೈಕ್‌ನ್ನು ಬಿಟ್ಟು ಸ್ಮಶಾನದ ಹಿಂದೆ ಇರುವ ದಟ್ಟ ಅರಣ್ಯದಲ್ಲಿ ಓಡಿ ಹೋಗಿದ್ದಾನೆ.
ವಾಹನದಲ್ಲಿದ್ದ ನಾಲ್ಕು ನೈಲಾನ್ ಚೀಲಗಳಲ್ಲಿ 18 ಲೀಟರ್ ಗೋವಾ ಮದ್ಯ, 71.250 ಲೀಟರ್ ಗೋವಾ ಫೆನ್ನಿ, 24 ಲೀಟರ್ ಗೋವಾ ಬಿಯರ್(Goa Bear) ಪತ್ತೆಯಾಗಿದೆ. ಅಂದಾಜು 66,700 ರು. ಮದ್ಯ ಹಾಗೂ ದ್ವಿಚಕ್ರ ವಾಹನದ ಅಂದಾಜು ಮೌಲ್ಯ ರೂ. 48,000 ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಾರಿಯಾದ ಆರೋಪಿಯ ಪತ್ತೆಗಾಗಿ ಅಬಕಾರಿ ಇಲಾಖೆ(Exice Department) ತನಿಖೆ ನಡೆಸಿದ್ದಾರೆ. ಅಬಕಾರಿ ಅಧಿಕಾರಿ ಮಹಾಂತೇಶ ಹಾಗೂ ಜಿಲ್ಲಾ ತಂಡದ ಸಿಬ್ಬಂದಿಗಳು ಭಾಗವಹಿಸಿದ್ದರು.
ಇದನ್ನು ಓದಿ : ನೇತ್ರಾಣಿ ಅಡ್ವೆಂಚರ್ ಅಧಿಕೃತ ಖಾತೆ ಹ್ಯಾಕ್. ದೂರು ದಾಖಲು.
