ಕಾರವಾರ(Karwar) : ಭಾನುವಾರದ ಸಂತೆ ಮಾರುಕಟ್ಟೆಯಲ್ಲಿ(Sunday Market) ಅನ್ಯ ಕೋಮಿನ ವ್ಯಾಪಾರಿಯೊಬ್ಬ ತರಕಾರಿಗಳಿಗೆ ಎಂಜಲು ಉಗಿದು ಗಲೀಜು ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಖುದ್ದು ಗ್ರಾಹಕರೊಬ್ಬರೂ ಈ ದೃಶ್ಯವನ್ನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕಾರವಾರದ ಪಿಕಳೆ ರೋಡ್ ನಲ್ಲಿ(Karwar Pikale Road)ಹಾವೇರಿ ಜಿಲ್ಲೆಯ ಹಾನಗಲ್ ನಿಂದ ಮಾರಾಟಕ್ಕೆ ತಂದಿದ್ದ ತರಕಾರಿಗಳಿಗೆ ತನ್ನ ಎಂಜಲನ್ನು ಪದೇ ಪದೇ ಉಗಿಯುತ್ತಿದ್ದ.  ಅಬ್ದುಲ್ ಹಸನ್ ಸಾಬ್ ರಜಾಕ್ ವ್ಯಾಪಾರಿ. ಸದ್ಯ ಈ ವಿಡಿಯೋ ಬಾರೀ ವೈರಲ್(Viral) ಆಗುತ್ತಿದೆ.

ಸಾರ್ವಜನಿಕರು ಉಗಿದ ವ್ಯಾಪಾರಿಯು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಧಾವಿಸಿ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ನಗರಸಭೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದರು. ನಂತರ ವ್ಯಾಪಾರಿಯನ್ನು ಕಾರವಾರದ ನಗರ ಪೊಲೀಸ್ ಠಾಣೆಯ (Karwar Town Police Station) ವಶಕ್ಕೆ ತೆಗೆದುಕೊಂಡಿದ್ದಾರೆ. ನಗರಸಭೆಯವರು ತರಕಾರಿಯನ್ನ ವಶಕ್ಕೆ ಪಡೆದಿದ್ದಾರೆ.

ಮಾರ್ಕೆಟ್ ನಲ್ಲಿ ಈ ರೀತಿಯಾಗಿ ತರಕಾರಿ, ಸೊಪ್ಪಿನ ಮೇಲೆ ಉಗಿಯುತ್ತಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಇಂಥ ವ್ಯಾಪಾರಿಗಳಿಂದ ಜಾಗೃತೆ ಇರಬೇಕೆಂದು ಸಾರ್ವಜನಿಕರು ಮೊಬೈಲ್ ಸಂದೇಶ ರವಾನಿಸುತ್ತಿದ್ದಾರೆ.

ಇದನ್ನು ಓದಿ : ಎಸ್ ಡಿ ಪಿ ಐ ಮುಖಂಡರ ವಿರುದ್ಧ bjp ದೂರು ದಾಖಲು.

ಭಟ್ಕಳ ಪೊಲೀಸರಿಂದ ಭರ್ಜರಿ ಬೇಟೆ. ಗೋಮಾಂಸ ವಶಕ್ಕೆ

ಕಾನಸೂರು ಸುತ್ತ ಕಾಡಾನೆ ಕಾಟ

ಪೊಲೀಸ್ ಸಮವಸ್ತ್ರದಲ್ಲಿ ವಿಡಿಯೋ ಕಾಲ್