ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ (Dandeli): 60 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮತ್ತು ದರೋಡೆ ನಡೆಸಿದ್ದ ಆರೋಪಿ ಹಲ್ಲೆಗೆ ಮುಂದಾದಾಗ ಪೊಲೀಸರು ಆತನ ಕಾಲಿಗೆ ಗುಂಡೇಟು ನೀಡಿದ ಘಟನೆ ನಡೆದಿದೆ.
ದಾಂಡೇಲಿ(Dandeli) ಬೈಲ್‌ಪಾರ್ ನಿವಾಸಿ ರೌಡಿಶೀಟರ್ ಫೈರೋಜ್ ಯಾಸಿನ್ ಯರಗಟ್ಟಿ (23) ಆರೋಪಿ. ಜೂನ್ 12ರಂದು ಮಧ್ಯಾಹ್ನದ ವೇಳೆ ವಿಕಲಚೇತನ ಮಹಿಳೆ ತನ್ನ ಮನೆಯಿಂದ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗೋವಾಗ ಮಹಿಳೆಯನ್ನು ಅಡ್ಡ ಗಟ್ಟಿ ಚಾಕು ತೋರಿಸಿ ಕಾಡಿಗೆ ಎಳೆದೊಯ್ದಿದ್ದ ಅಲ್ಲದೇ ಅವಳಲ್ಲಿದ್ದ ಹಣವನ್ನ ಎಗರಿಸಿದ್ದ.
ಘಟನೆ ಸಂಬಂಧಿಸಿ ಮಹಿಳೆ ದಾಂಡೇಲಿ ನಗರ ಠಾಣಾ(Dandeli Town Station) ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ಸಂಬಂಧಿಸಿ ತನಿಖೆ ನಡೆಸುತ್ತಿದ್ದ ಪೊಲೀಸರು ಸುಮಾರು ನೂರು ಸಂಶಯಾಸ್ಪದ ವ್ಯಕ್ತಿಗಳ ಫೋಟೊ ಸಂತ್ರಸ್ತೆಗೆ ತೋರಿಸಿದ್ದರು ಆಗ ರೌಡಿಶೀಟರ್(Roudysheeter) ಫೈರೋಜ್ ಯಾಸಿನ್ ಯರಗಟ್ಟಿಯನ್ನು ಸಂತ್ರಸ್ತೆ ಗುರುತಿಸಿದ್ದಳು.
ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಮದರಖಂಡಿ ನೇತೃತ್ವದಲ್ಲಿ ದಾಂಡೇಲಿ(Dandeli), ಹಳಿಯಾಳ(Haliyal), ಜೊಯಿಡಾ(Joida) ಪೊಲೀಸರ ಮೂರ್ನಾಲ್ಕು ತಂಡವನ್ನ ರಚಿಸಿ ಆರೋಪಿಯನ್ನು ಹುಡುಕಾಡಿದ್ದರು. ಶನಿವಾರ ಸಿಕ್ಕ ಮಾಹಿತಿ ಪ್ರಕಾರ ದಾಂಡೇಲಿ ಯಲ್ಲಾಪುರ ರಸ್ತೆಯ ಕುಳಗಿ(Kulagi) ರಸ್ತೆಯಲ್ಲಿ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದರು. ದಾಂಡೇಲಿ ನಗರ ಠಾಣೆಯ ಕ್ರೈಂ ಪಿಎಸ್‌ಐ ಕಿರಣ್ ಪಾಟೀಲ್, ಸಿಬ್ಬಂದಿ ಇಮ್ರಾನ್, ಕೃಷ್ಣಪ್ಪ ಆರೋಪಿಯನ್ನು ಹಿಡಿಯಲು ಯತ್ನಿಸಿದರು. ಆಗ ಆರೋಪಿ ಪೊಲೀಸರನ್ನು ನೋಡಿದ ಕೂಡಲೇ ಅರಣ್ಯ ಪ್ರದೇಶದೊಳಗೆ ಹೊಕ್ಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಪ್ಪಗೆ ಕಲ್ಲು ಹಾಗೂ ಕೋಲಿನಿಂದ ಹೊಡೆದು ಗಾಯಗೊಳಿಸಿದ. ಸಿಬ್ಬಂದಿ ಇಮ್ರಾನ್ ಕೈಗೆ ತನ್ನ ಚಾಕುವಿನಿಂದ ತಿವಿದ. ಇದನ್ನು ನೋಡಿ ಪಿಎಸ್‌ಐ ಕಿರಣ್ ಆತನನ್ನು ಹಿಡಿಯಲು ಬಂದಾಗ ಚಾಕುವಿನಿಂದ ಕುತ್ತಿಗೆ ಕುಯ್ಯಲು ಯತ್ನಿಸಿದ್ದ ಎನ್ನಲಾಗಿದೆ. ಈ ವೇಳೆ ಚಾಕುವಿನ ಹಲ್ಲೆ ತಡೆಯಲು ಯತ್ನಿಸಿದ್ರೂ ಪಿಎಸ್‌ಐ ಕಿರಣ್ ಕೈ ಹಾಗೂ ಕಾಲಿಗೆ ಗಾಯವಾಗಿದೆ.
ಆಗ ಆರೋಪಿ ಕಾಡಿನ ನಡುವೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪಿಎಸ್‌ಐ ಎರಡು ಬಾರಿ ವಾರ್ನಿಂಗ್ ಫೈರ್ ಮಾಡಿ ಬಳಿಕ ಆರೋಪಿಯ ಎಡಕಾಲಿನ ಕೆಳಗೆ ಗುಂಡೇಟು ಹೊಡೆದಿದ್ದಾರೆ.
ಗಾಯಗೊಂಡ ಪೊಲೀಸರು ಮತ್ತು ಆರೋಪಿಗೆ ದಾಂಡೇಲಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ಫೈರೋಜ್ , ಚಾಲಕ ಹಾಗೂ ಮರಳು ಸಾಗಾಟ ವೃತ್ತಿ ಮಾಡುತ್ತಿದ್ದು ಈತನ ವಿರುದ್ಧ ಸಾರಾಯಿ ಸಾಗಾಟ, ಗಾಂಜಾ, ಪೊಲೀಸರಿಗೆ ಅವಾಚ್ಯ ನಿಂದನೆ, ಹೊಡೆದಾಟ ಸಂಬಂಧ ಪ್ರಕರಣಗಳಿವೆ.
ದಾಂಡೇಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಭೇಟಿ ನೀಡಿದ್ದಾರೆ.ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.
ಇದನ್ನು ಓದಿ : ಮನೆಯೊಳಗೆ ಅವಿತುಕೊಂಡ ಚಿರತೆ. ನೋಡಿ ಕೂಗಿದ ಮಹಿಳೆ. ಶಬ್ದಕ್ಕೆ ಹೊರ ಬಂದು ಯುವಕನ ಮೇಲೆ ದಾಳಿ.
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ. ಆತಂಕಗೊಂಡ ವಾಹನ ಸವಾರರು
ಅಮ್ಮ ತೀರಿ ಹೋದ ವಾರದೊಳಗೆ ಅಪ್ಪನ ಸಾವು. ವಿಮಾನ ದುರಂತದಲ್ಲಿ ಅನಾಥರಾದ ಪುಟ್ಟ ಮಕ್ಕಳು.