ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ ಗಡಿ ಭಾಗದಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಭರ್ಜರಿ ದಾಳಿ(Exice Raid) ನಡೆಸಿದ್ದಾರೆ.

ದಾಳಿಯಲ್ಲಿ ಸುಮಾರು 13,76,750 ರೂ. ಮೌಲ್ಯದ ಗೋವಾ ಮದ್ಯ(Goa Liquor) ಮತ್ತು ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಗೋವಾದಿಂದ ಅರಣ್ಯ ಮಾರ್ಗದ ಮೂಲಕ ಕರ್ನಾಟಕಕ್ಕೆ(Goa to Karnataka) ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯದ ಬಗ್ಗೆ ಮಾಹಿತಿ ಪಡೆದ ಸಿಬ್ಬಂದಿಗಳು ಈ ದಾಳಿ ನಡೆಸಿದ್ದರು.

ಕಾರವಾರ ತಾಲೂಕಿನ ಮೂಡಗೇರಿ ಡ್ಯಾಂ(Mudageri Dam) ಬಳಿ ನಡೆದ ಈ ಕಾರ್ಯಾಚರಣೆಯಲ್ಲಿ ಐದು ದ್ವಿಚಕ್ರ ವಾಹನಗಳು ಹಾಗೂ ಒಂದು ಕಾರು ಸೇರಿದಂತೆ ಒಟ್ಟು ಆರು ವಾಹನಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಬಕಾರಿ ಅಧಿಕಾರಿಗಳು ಸಿಬ್ಬಂದಿಗಳು ದಾಳಿ ಮಾಡುತ್ತಿದ್ದಂತೆ ಮದ್ಯ ಸಾಗಾಟದಾರರು ತಮ್ಮ‌ವಾಹನಗಳನ್ನ ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಸಿಕ್ಕ ವಾಹನಗಳ ದಾಖಲೆ ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದೆ. ಆರೋಪಿಗಳ ಪತ್ತೆಗಾಗಿ‌ ಮಾಹಿತಿ ಕ್ರೋಢಿಕರಿಸಲಾಗುತ್ತಿದೆ. ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಉಪ ಅಧೀಕ್ಷಕರು ರಮೇಶ್ ಬಿ. ಭಜಂತ್ರಿ, ನಿರೀಕ್ಷಕರು ರಂಜೀತಕುಮಾರ ಮೀತ್ರಾ, ಉಪ ನಿರೀಕ್ಷಕರು ನಾಗರಾಜ ಕೊಟಗಿ, ಸಂಜಯ್ ನಾಗೇಕರ, ಸಿಬ್ಬಂದಿ ಪ್ರವೀಣಕುಮಾರ ಕಲ್ಲೊಳ್ಳಿ, ಹೇಮಚಂದ್ರ ಈರಣ್ಣನವರ್, ವಿರೇಶ ಕುರಿಯವರ ಹಾಗೂ ದಿನಗೂಲಿ ಚಾಲಕರು ಇಮ್ಮಿಯಾಝ್ ಮತ್ತು ಪವನ ಮಾಸೂರಕರ ಭಾಗವಹಿಸಿದ್ದರು.

ಇದನ್ನು ಓದಿ : ಕಾರವಾರ ಜೈಲಿನಲ್ಲು ಸಿಕ್ತು‌ ಮೊಬೈಲ್ ಪೋನ್, ನಿಷೇಧಿತ ವಸ್ತುಗಳು.

ಶಬರಿಮಲೆ ಯಾತ್ರಿಕರೇ ಎಚ್ಚರ. ನೀರಿನಲ್ಲಿದೆ ಮಾರಣಾಂತಿಕ ‌ಸೋಂಕು.

ರಾಜಧಾನಿ ಬೆಂಗಳೂರಿನಲ್ಲಿ ಶಿರಸಿ ಮೂಲದ ಮಹಿಳೆ ಹತ್ಯೆ.