ಹೊನ್ನಾವರ(Honnavar) : ಸರ್ಕಾರಿ ಬಸ್ (Government Bus) ಹಾಗೂ ಬೈಕ್ ನಡುವೆ ಮುಖಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಶರಾವತಿ ಸೇತುವೆ ಮೇಲೆ ಸಂಭವಿಸಿದೆ.
ಘಟನೆಯಲ್ಲಿ ಮಾವಿನಕುರ್ವಾದ(Mavinakurva) ರಾಘವೇಂದ್ರ ಸೋಮಯ್ಯ ಗೌಡ (34), ಸಂಶಿಯ(Samshi) ಗೌರೀಶ್ ನಾಯ್ಕ(25), ಖರ್ವದ(Kharva) ರಮೇಶ್ ನಾಯ್ಕ (22)ಮೃತರಾಗಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್(Ksrtc Bus) ಬಿಜಾಪುರದಿಂದ ಮಂಗಳೂರು(Bijapura to Mangalore) ಕಡೆ ತೆರಳುತಿತ್ತು. ಬೈಕ್ ಸವಾರರು ಕಾಸರಕೋಡು ಕಡೆಯಿಂದ ಹೊನ್ನಾವರಕ್ಕೆ(Kasarakodu to Honnavar) ಬರುತ್ತಿದ್ದರು. ಬೆಳಗಿನ ಜಾವ ನಾಲ್ಕುವರೆ ಗಂಟೆಗೆ ಶರಾವತಿ ಸೇತುವೆ ಮೇಲೆ ಈ ಅಪಘಾತ ನಡೆದಿದೆ.
ಸ್ಥಳಕ್ಕೆ ಹೊನ್ನಾವರ ಪಿಎಸ್‌ಐ ಮಂಜುನಾಥ ಗೌಡ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ(Honnavar Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಕೋಟಿಗಟ್ಟಲೆ ಆಸ್ತಿ ಇದ್ದರೂ ವೃದ್ಧಾಶ್ರಮದಲ್ಲಿ ಹಿರಿಯ ಸಾಹಿತಿ ಕೊನೆಯುಸಿರು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ