ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ಪಾಕಿಸ್ತಾನ ಏಜೆಂಟ್ ಗೆ(Pak Agent) ನೌಕಾನೆಲೆಯ ಮಾಹಿತಿ ಸೋರಿಕೆ  ಮಾಡಿದ ಹಿನ್ನಲೆಯಲ್ಲಿ ಎನ್ ಎ ಐ(NIA) ಅಧಿಕಾರಿಗಳು ಇಬ್ಬರಿಗೆ ಹೆಡೆಮುರಿ ಕಟ್ಟಿದ್ದಾರೆ.

ಕಾರವಾರ(Karwar) ತಾಲೂಕಿನ ಮುದಗಾದ ವೇತನ್ ತಾಂಡೇಲ್ ಹಾಗೂ ಅಂಕೋಲಾ(Ankola) ತಾಲೂಕಿನ ಹಳವಳ್ಳಿಯ ಅಕ್ಷಯ್ ನಾಯ್ಕ ನನ್ನ ಬಂಧಿಸಲಾಗಿದೆ. 2024ರ ಆಗಸ್ಟ್ ತಿಂಗಳಲ್ಲಿ ಮೂವರನ್ನು ವಿಚಾರಣೆ ನಡೆಸಿ ನೋಟೀಸ್ ನೀಡಿದ್ದ ಎನ್ ಎ ಐ(NIA) ಅಧಿಕಾರಿಗಳು ನಿನ್ನೆಯಿಂದ ಮತ್ತೆ ಕಾರ್ಯಾಚರಣೆಗೆ ಇಳಿದಿದ್ದರು.

ಪಾಕಿಸ್ತಾನಿ ಏಜೆಂಟ್ ಓರ್ವಳು ದೇಶದ ನಾನಾ ಕಡೆಗಳಿಂದ ಕೆಲ ಯುವಕರನ್ನ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕಿಸಿ ಇಲ್ಲಿನ ಅಗತ್ಯ ಮಾಹಿತಿ ಪಡೆಯುತ್ತಿದ್ದಳು  ಹನಿ ಟ್ರ್ಯಾಪ್ ಮಾಡಿ  ಮಾಹಿತಿ ಕಲೆ ಹಾಕುತ್ತಿದಳು.

ಆರಂಭದಲ್ಲಿ ಇಲ್ಲಿ ಬಂಧಿತರಾಗಿರುವ ವೇತನ್ ಮತ್ತು ಅಕ್ಷಯ್ ಅವರನ್ನ ಫೇಸ್‌ಬುಕ್ ಮೂಲಕ ತಾನು ಮರೈನ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಪಾಕಿಸ್ತಾನಿ ಏಜೆಂಟ್ ಈ ಯುವಕರಿಂದ ಸೀಬರ್ಡ್ ನೌಕಾನೆಲೆಯ ಬಗ್ಗೆ, ಯುದ್ಧನೌಕೆಗಳ ಮಾಹಿತಿ, ಆಗಮನ ಹಾಗೂ ಹೊರಡುವ ಸಮಯ, ಭದ್ರತೆಯ ಮಾಹಿತಿ ಪಡೆಯುತ್ತಿದ್ದಳು.

ಮಾಹಿತಿ ನೀಡಿದ್ದಕ್ಕೆ ಅವರಿಗೆ ಹಣವನ್ನ ಬ್ಯಾಂಕ್ ಖಾತೆಗೆ ಹಾಕುತ್ತಿದ್ದಳು. ಮುದಗಾದ ವೇತನ್ ತಾಂಡೇಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್‌ 8 ತಿಂಗಳ ಕಾಲ ಆಕೆಯಿಂದ ಹಣ ಪಡೆದಿದ್ದಾರೆನ್ನಲಾಗಿದೆ.

ಈ ಹಿನ್ನಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ  ಕಾರವಾರಕ್ಕೆ ಆಗಮಿಸಿದ್ದ ಹೈದರಾಬಾದ್ ಹಾಗೂ ಬೆಂಗಳೂರು ಎನ್ ಎ ಐ ಅಧಿಕಾರಿಗಳು ತನಿಖೆ ನಡೆಸಿದ್ದರು. 2023ರಲ್ಲಿ ಹೈದ್ರಾಬಾದ್ ನಲ್ಲಿ ಬಂಧಿತರಾದ ದೀಪಕ್ ಎಂಡ್ ಟೀಮ್ ಲಾಕ್ ಆದಾಗ ಅವರ ಮಾಹಿತಿ ಹಿನ್ನೆಲೆಯಲ್ಲಿ ಇಲ್ಲಿನ ಮೂವರ ಹೆಸರು ಬೆಳಕಿಗೆ ಬಂದಿತ್ತು