ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ದೇವರಜಾತ್ರೆಗೆ ಹೋದಸಂದರ್ಭದಲ್ಲಿ ಮನೆಗೆ ಬೆಂಕಿ(House Fire) ಹಚ್ಚಿದ ಘಟನೆ ಉತ್ತರಕನ್ನಡ(Uttarakannada) ಜಿಲ್ಲೆಯ ಕುಮಟಾ(Kumta) ತಾಲೂಕಿನ ದೇವರಹಕ್ಕಲ ಗ್ರಾಮದಲ್ಲಿ(Devarahakkal Village) ಸಂಭವಿಸಿದೆ.
ದೇವರಹಕ್ಕಲ ಗ್ರಾಮದ ದಿನಕರ ಕುಮಟಾಕರ ಎಂಬುವವರಿಗೆ ಸೇರಿದ ಮನೆಗೆ ಬೆಂಕಿ ಹಚ್ಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ ಸುಮಾರಿಗೆ ದಿನಕರ ಅವರ ಕುಟುಂಬವು ಕುಮಟಾದ ವೆಂಕಟರಮಣ ದೇವರ(Kumta Venkatramana Deva) ಜಾತ್ರೆಗೆ ತೆರಳಿತ್ತು ಎನ್ನಲಾಗಿದೆ. ಮನೆಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಫರ್ ಮತ್ತು ಮಹಮದ್ ಹಸನ್ ಎಂಬ ತಂದೆ ಮತ್ತು ಮಗನನ್ನು ಕುಮಟಾ ಪೊಲೀಸರು(Kumta Police) ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.
ಕುಮಟಾ ಪೊಲೀಸ್ ಠಾಣಾ(Kumta Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಿತಿಗತಿಯ ಗಂಭೀರತೆಯನ್ನು ಗಮನಿಸಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(Uttarakannada SP) ದೀಪನ್ ಎಂ ಎನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವರಹಕ್ಕಲ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಮನೆ ಮಾಲೀಕ ದಿನಕರ್ ಕುಮಟಾಕರ್ ಮತ್ತು ಜಾಪರ್ ಕುಟುಂಬದವರ ನಡುವೆ ಜಮೀನಿನ ವಿಚಾರಕ್ಕಾಗಿ(Property Issue) ಆಗಾಗ ಜಗಳ ನಡೆಯುತಿತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿ ಜಾಪರ್ ಮನೆಯವರು ಬೆಂಕಿ ಹಚ್ಚಿದ್ದಾರೆಂಬ ಆರೋಪ ವ್ಯಕ್ತವಾಗಿದ್ದು ಜಾಪರ್ ಕುಟುಂಬದವರು ಆರೋಪವನ್ನ ತಳ್ಳಿ ಹಾಕಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : ಬಂದರಿನಲ್ಲೊಂದು ವಿಸ್ಮಯ. ಕತ್ತರಿಸದ ಮೇಲೂ ಜೀವಂತವಿದ್ದ ಬಂಗಡೆ ಮೀನು.
