ಹೊನ್ನಾವರ(HONNAVAR) : ವ್ಯಕ್ತಿಯೊರ್ವನನ್ನ ಅಪಹರಿಸಿ ಕೊಲೆಗೈದು ಪರಾರಿಯಾದ ಘಟನೆ ಹೊನ್ನಾವರ ತಾಲೂಕಿನ ಗೇರುಸೊಪ್ಪ(GERUSOPPA) ಬಳಿ ನಡೆದಿದೆ.

ಆಂಧ್ರಪ್ರದೇಶ(ANDRAPRADESHA) ಮೂಲದ ಭೋಜನಪು ಶಾಂಭಸಿವ (39) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಅಣ್ಣಮಯ್ಯ(ANNAMAYYA) ಜಿಲ್ಲೆಯ ಕಳಕಡ ಮಂಡಲದ(KALAKADA MANDAL) ತಿಪ್ಪಿಗರಿಪಲ್ಲಿ(TIPPIGARIPALLI) ಗ್ರಾಮದವನಾಗಿದ್ದ. ಆಗಸ್ಟ್ 24 ರಂದು  ಭೋಜನಪು ಶಾಂಭಸಿವ ಮನೆಯಿಂದ ಕಾಣೆಯಾಗಿದ್ದ. ಈ ಬಗ್ಗೆ ಕಳಕಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಟ್ಯಾಕ್ಸಿ ಚಾಲಕನಾಗಿದ್ದ ಈತನಿಗೆ ಬಾಡಿಗೆ ನೆಪದಲ್ಲಿ ಮೂವರು ವ್ಯಕ್ತಿಗಳು  ಹೊನ್ನಾವರ ಕಡೆ ಕರೆ ತಂದಿದ್ದರೆನ್ನಲಾಗಿದೆ .

ಹೊನ್ನಾವರದಿಂದ ಸಾಗರ(HONNAVAR to SAGAR) ಮಾರ್ಗವಾಗಿ ತೆರಳುತ್ತಿದ್ದಾಗ ಗೇರುಸೊಪ್ಪ ವ್ಯೂ ಪಾಯಿಂಟ್ ಅನತಿ ದೂರದಲ್ಲಿ ಕೊಲೆ ಮಾಡಿ ಎಸೆದು ಹೋಗಿದ್ದಾರೆ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಂಧ್ರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕೊಲೆಯಾದ ಭೋಜನಪು ಶಾಂಭಸಿವ ಅವರ ಪತ್ನಿಯ ಅನೈತಿಕ ಸಂಬಂಧದಿಂದ  ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಮುಂದುವರಿದಿದೆ.

ಇದನ್ನು ಓದಿ : ದೇಶಪಾಂಡೆ ಸಿಎಂ ಆದ್ರೆ ಖುಷಿ, ಆದ್ರೆ …..

ಬೇಟೆಗೆ ಬಂದು ಸಾವು ತಂದುಕೊಂಡ ಚಿರತೆ

ಭಟ್ಕಳದಲ್ಲಿ ಹೋಟೆಲ್ ಮೇಲೆ ಪೋಲೀಸರ ದಾಳಿ https://esamachara.com/police-raid-on-hotel-in-bhatkal/