ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬೋಟಿನಿಂದ(Fishing Boat) ಜಾರಿ ಬಿದ್ದ ಮೀನುಗಾರನೋರ್ವನನ್ನ ಮಲ್ಪೆ ಬೋಟ್(Malpe Boat) ಮೀನುಗಾರರು‌ ರಕ್ಷಿಸಿದ(Rescue) ಘಟನೆ ನಡೆದಿದೆ.

ಒರಿಸ್ಸಾ ಮೂಲದ(Odissa Native) ರಾಜೇಂದ್ರ ಎಂಬಾತ ರಕ್ಷಣೆಗೊಳಗಾದ ಮೀನುಗಾರನಾಗಿದ್ದಾನೆ. ಈತ ಗೋವಾದ ಸಿಕ್ಸ್ ಸ್ಟಾರ್ (Goa Six Star) ಹೆಸರಿನ ಯಾಂತ್ರಿಕ ದೋಣಿಯಲ್ಲಿ ಮೀನುಗಾರನಾಗಿದ್ದು ಬುಧವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ರಾಜೇಂದ್ರ ಬೋಟ್ ಹಿಂಬದಿಯಲ್ಲಿ ಶೌಚಕ್ಕೆ ಕುಳಿತಿದ್ದ ವೇಳೆ ಆಯ ತಪ್ಪಿ ನೀರಿಗೆ ಬಿದ್ದಿದ್ದಾನೆ. ಆದರೆ ಆ ಬೋಟಿನವರಾರು ಗಮನಿಸಿರಲಿಲ್ಲ ಎನ್ನಲಾಗಿದೆ.

ಕಾರವಾರ ಮತ್ತು ಗೋವಾ ನಡುವಿನ(Karwar and Goa between)  ಬೆಥ್ಲ ಅರಬ್ಬಿ ಸಮುದ್ರದಲ್ಲಿ  ಮಲ್ಪೆಯ(Malpe) ರತಿಯಮ್ಮ ಬೋಟಿನವರು ತೆರಳುತ್ತಿದ್ದ ವೇಳೆ ಗಮನಿಸಿದ್ದಾರೆ. ಅಂತೂ ಹರಸಾಹಸ ಪಟ್ಟು ಮೇಲಕ್ಕೆ ತೆಗೆದುಕೊಂಡಿದ್ದಾರೆ. ಸುಮಾರು ಐದು ತಾಸಿನವರೆಗೆ ರಾಜೇಂದ್ರ ತನ್ನ ಪ್ರಾಣ ಉಳಿಸಿಕೊಳ್ಳಲು  ಹರಸಾಹಸ ಪಟ್ಟಿದ್ದಾನೆ. ಆಪದ್ಬಾಂಧವರಂತೆ ರತಿಯಮ್ಮ ಬೋಟಿನವರು ಬಂದು ಜೀವ ರಕ್ಷಿಸಿದ್ದಾರೆ. ರಕ್ಷಣೆಗೊಳಗಾದ ಮೀನುಗಾರನಿಗೆ ರತಿಯಮ್ಮ ಬೋಟಿನವರು ಉಪಚಾರ ಮಾಡಿದ್ದು,  ಕೆಲ ಹೊತ್ತಿನವರೆಗೆ ಆತ ಆಘಾತಕ್ಕೆ ಒಳಗಾಗಿದ್ದನು.

ಮೀನುಗಾರ ಸಿಕ್ಕ ಬಗ್ಗೆ ವಯರಲೆಸ್ ಮೂಲಕ ಸಂದೇಶ ರವಾನಿಸಲಾಗಿದ್ದು, ಸದ್ಯ ಮಲ್ಪೆ ಬಂದರಿಗೆ(Malpe Port) ರಾಜೇಂದ್ರನನ್ನ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ಗೋವಾದ ಸಿಕ್ಸ್ ಸ್ಟಾರ್ ಬೋಟ್ ಮಾಲೀಕರಿಗೆ ಸುದ್ದಿ ತಲುಪಿದ್ದು ಗುರುವಾರ ಬೆಳಿಗ್ಗೆ ಮಲ್ಪೆಗೆ ಬಂದು ಕರೆದೊಯ್ಯುತ್ತಿದ್ದಾರೆ.

ಇದನ್ನು ಓದಿ : ತಿನೆಘಾಟ್ ಬಳಿ ಸರಣಿ ಅಪಘಾತ

ಪೊಲೀಸ್ ಇಲಾಖೆಯಲ್ಲಿ ಆಯುಧ ಪೂಜೆ.