ಇ ಸಮಾಚಾರ ಡಿಜಿಟಲ್ನ್ಯೂಸ್ (esamachara  digital news) ಭಟ್ಕಳ(Bhatkal) :  ಪವಿತ್ರರಂಜಾನ್ ಹಬ್ಬದ(Ramzan Festival) ಹಿನ್ನೆಲೆ  ಭಟ್ಕಳ ನಗರಸಭೆ(Bhatkal CMC) ವ್ಯಾಪ್ತಿಯ ಬಂದರ ರಸ್ತೆಯಲ್ಲಿ(Binder Road) ಹಾಕಲಾಗಿದ್ದ ಇಸ್ಲಾಮಿಕ್ ಬಾವುಟವನ್ನು(Islamic Flag) ತೆರವುಗೊಳಿಸುವ ವೇಳೆ ಪ್ರತಿಭಟಿಸಿದ ಘಟನೆ ಶನಿವಾರ ನಡೆದಿದೆ.

ಈ ಸಂದರ್ಭದಲ್ಲಿ ಕೆಲ ಕಾಲ ಗೊಂದಲದ  ವಾತಾವರಣ ನಿರ್ಮಾಣವಾಯಿತು.  ಮಾರ್ಚ್ 19ರಂದು ಸಂಜೆ ಬಂದರ್ ರಸ್ತೆ ಎರಡನೇ ಕ್ರಾಸ್ ಯು-ಟರ್ನ್ ಬಳಿ ಡಿವೈಡರ್ ಮಧ್ಯದಲ್ಲಿ ಸುಮಾರು 25 ಅಡಿ ಎತ್ತರದ ಕಬ್ಬಿಣದ ಪೈಪ್ ಸ್ಥಾಪಿಸಿ, ಹಸಿರು ಬಣ್ಣದ ಉರ್ದು ಲಿಪಿಯ ಬರಹ ಹಾಗೂ ಖಡ್ಗದ ಚಿಹ್ನೆ ಹೊಂದಿದ ಬಾವುಟವನ್ನು ಹಾರಿಸಲಾಗಿತ್ತು. ಹಬ್ಬ ಮುಗಿದಿದ್ದರಿಂದ  ಇಂದು  ನಗರಸಭೆ ಕಮಿಷನರ್(CMC Commissioner) ಬಾಬಾಸಾಹೇಬ್ ಮಾನೆ ಅವರ ನೇತೃತ್ವದಲ್ಲಿ, ಪೊಲೀಸ್ ಬಂದೋಬಸ್ತ್ ನಲ್ಲಿ  ಬಾವುಟವನ್ನು ತೆರವುಗೊಳಿಸಲಾಯಿತು.

ಕೆಲ ತಾಸುಗಳ ನಂತರ ಸುಮಾರು ಐವತ್ತು ಜನರ ಗುಂಪೊಂದು ಸ್ಥಳಕ್ಕಾಗಮಿಸಿ, ಅದೇ ಸ್ಥಳದಲ್ಲಿ ಮತ್ತೊಂದು ಬಾವುಟವನ್ನು ಹಾರಿಸಲು ಯತ್ನಿಸಿದರು. ತಕ್ಷಣ  ಪೊಲೀಸರು ಗುಂಪನ್ನು  ತಡೆದು, ಬಾವುಟವನ್ನು ಮತ್ತೊಮ್ಮೆ ಹಾಕದಂತೆ  ತೆರವುಗೊಳಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಗುಂಪಿನಲ್ಲಿದ್ದ ಕೆಲವರು ಬಂದರ್ ರಸ್ತೆ(Binder Road) ಬಂದ್ ಮಾಡಲು ಯತ್ನಿಸಿದರು. ಪೊಲೀಸರು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿದರು.

ಡಿ.ವೈ.ಎಸ್.ಪಿ ಗಿರೀಶ್ ಬಿ., ಸಿಪಿಐ ದಿವಾಕರ್ ಪಿ.ಎಂ ಹಾಗೂ ಪಿ.ಎಸ್.ಐ ನವೀನ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ವಿಚಾರದಲ್ಲಿ ಪೊಲೀಸರು ಜನರೊಂದಿಗೆ ಮಾತುಕತೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಬಳಿಕ ಸಮುದಾಯದ ಮುಖಂಡರನ್ನು ಡಿವೈಎಸ್‌ಪಿ ಕಚೇರಿಗೆ ಕರೆಸಿ ಸಭೆ ನಡೆಸಲಾಯಿತು. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಈ  ಪ್ರದೇಶದಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್(Police Security) ಏರ್ಪಡಿಸಲಾಗಿದೆ.

ಇದನ್ನು ಓದಿ : ದೇಶದ್ರೋಹಿ ದಾವುದ್ ಹೆಸರಿನ ಬಸ್. ತಡೆದು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು.