ಕಾರವಾರ : ಕುಮಟಾ 110ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 110 ಕೆವಿ ಬಸ್ ಬಾರ್ ನಿರ್ವಹಣೆ ಹಾಗೂ ಕುಮಟಾ, ಹೊನ್ನಾವರ ಮತ್ತು ಮುರ್ಡೇಶ್ವರ ಉಪಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ನಡೆಯಲಿದೆ.
ಹೀಗಾಗಿ ಆಗಸ್ಟ್ 14 ಬುಧವಾರದಂದು ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕವಿಪ್ರನಿನಿ ಅಧಿಕಾರಿಗಳು ತಿಳಿಸಿದ್ದಾರೆ. ಮೂರು ತಾಲೂಕುಗಳ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಹೊನ್ನಾವರ ವಿಭಾಗ ಕಾರ್ಯನಿರ್ವಾಹಕ ಇಂಜನೀಯರ್ ತಿಳಿಸಿದ್ದಾರೆ.