ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡ(Mundgod) : ಕಾತೂರ ಅರಣ್ಯ ವಲಯದ(Katuru Range Forest) ಬಾಳೆಕೊಪ್ಪ ಪ್ರದೇಶದಲ್ಲಿ ಜಿಂಕೆ ಚರ್ಮ(Deer Skin) ಹಾಗೂ ಕಾಡುಹಂದಿಯ(Wild boar) ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದವರನ್ನ ಅರಣ್ಯ ಇಲಾಖೆ(Forest Department) ಅಧಿಕಾರಿಗಳು ನಡೆಸಿದ  ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

ಒಟ್ಟು  ಐವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ದಾಳಿಯ ಸಂದರ್ಭದಲ್ಲಿ

ಕನಕಪ್ಪ ಮಾದರ, ಪರಶುರಾಮ ಮಾದರ, ಸುರೇಶ ಹಾಗೂ ಶಿವಪುತ್ರಪ್ಪ ಉಮೇಶ್ ಎಂಬವರನ್ನು ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ನಡೆಸಿದ ದಾಳಿಯಲ್ಲಿ  ಬಂಧಿಸಿದ್ದಾರೆ. ಇವರು ಬಳಸುತ್ತಿದ್ದ ಎರಡು ಬೈಕುಗಳಲ್ಲಿದ್ದ ಒಂದು ಜಿಂಕೆ ಚರ್ಮ ಹಾಗೂ 3.9 ಕಿಲೋ ಕಾಡುಹಂದಿ(wild boar) ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಐವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಅರಣ್ಯ ವಲಯಾಧಿಕಾರಿಗಳ ಸೂಚನೆಯಂತೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿ ಸಮಯೋಚಿತ ದಾಳಿ ನಡೆಸಿದ ಪರಿಣಾಮ ಅಕ್ರಮ ವನ್ಯಜೀವಿ(Wildlife) ಸಾಗಾಟ ಬಯಲಿಗೆ ಬಿದ್ದಿದೆ.

ಇದನ್ನು ಓದಿ : ಡಿಸೆಂಬರ್ 22ರಿಂದ ಕರಾವಳಿ ಉತ್ಸವ.  ಕಲಾವಿದರಿಂದ ಅರ್ಜಿ ಆಹ್ವಾನ

ಅಗ್ನಿ ದುರಂತದಲ್ಲಿ ಭಸ್ಮವಾದ ಫರ್ನಿಚರ್ ಘಟಕ. ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ.

ಎಂಡಿಎಮ್‌ಎ ಸಾಗಾಟ ಪ್ರಕರಣ. ನಾಲ್ವರ ಬಂಧನ. 50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ

ಗೋವಾ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ – 25 ಜನ ಸಜೀವ ದಹನ