ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola):  ತಾಲೂಕಿನ ಬೆಳಸೆಯ ಸೋಣಗಿಮಕ್ಕಿಯಲ್ಲಿ ಎನ್ ಎಸ್ ಎಸ್  ಕ್ಯಾಂಪ್ ಗೆ (NSS Camp) ತೆರಳಿದ ವಿದ್ಯಾರ್ಥಿನಿಯೋರ್ವಳಿಗೆ ಆಕಸ್ಮಿಕವಾಗಿ ತಲೆ ಸುತ್ತು ಬಂದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಜಿಸಿ ಕಾಲೇಜ್ ನಲ್ಲಿ ಬಿ ಎಸ್ ಸಿ(Bsc) ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಂದಿಗೆ ಗ್ರಾಮದ (Vandige Village) ಅನುಷಾ ಆಗೇರ ಎಂಬಾಕೆಯೇ ಮೃತ ದುರ್ದೈವಿ. ಸೋಮವಾರ ಕ್ಯಾಂಪ್ ನಲ್ಲಿದ್ದಾಗ ಬಿದ್ದು ವಾಂತಿ ಮಾಡಿಕೊಂಡಿದ್ದಾಳೆ.ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  ಆರೋಗ್ಯದಿಂದಿದ್ದ  ವಿದ್ಯಾರ್ಥಿನಿ ಅನುಷಾ ಕಾಲೇಜಿನಲ್ಲಿಯೂ ಅತ್ಯಂತ ಚಟುವಟಿಕೆಯಿಂದ ಎಲ್ಲಾ ಕಾರ್ಯಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದಳು . ಕೊವಿಡ್ 19 ರ ನಂತರ ಈ ರೀತಿ ಚಿಕ್ಕ ವಯಸ್ಸಿನ ಮಕ್ಕಳ ಆಕಸ್ಮಿಕ ಸಾವು ನಿಜವಾಗಿಯೂ ಸಮಾಜವೇ ಚಿಂತಿಸುವಂತೆ ಮಾಡಿದೆ. ಅಂತೂ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಬೇಕಿದೆ.

ಇದನ್ನು ಓದಿ : ಗಂಟಲಿನೊಳಗೆ ಮೀನು ಸಿಲುಕಿ ಯುವಕ ಸಾವು.

ಬಂದರು ಯೋಜನೆ ಮೀನುಗಾರರ ಹೊಟ್ಟೆ ಬರಿದಾಗಿಸುವ ಪ್ರಯತ್ನ: ದಿಲೀಪ್ ಅರ್ಗೇಕರ್

ಭಟ್ಕಳದಲ್ಲಿ ಶಾಲಾ ವಾಹನ ಮತ್ತು ಲಾರಿ ನಡುವೆ ಅಪಘಾತ.