ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋವಾ(Goa) : ಇಲ್ಲಿನ ಬರ್ಚ್ ಬೈ ರೋಮಿಯೊ ಲೆನ್ ಕ್ಲಬ್ ನಲ್ಲಿ ತಿಂಗಳ ಹಿಂದೆ ಸಂಭವಿಸಿದ ಭೀಕರ ಅಗ್ನಿ ದುರಂತ(Fire Tragedy) ಪ್ರಕರಣದಲ್ಲಿ ತಪ್ಪಿತಸ್ಥರಾದವರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಮೃತಪಟ್ಟವರ ಕುಟುಂಬದವರು ಆಗ್ರಹಿಸಿದ್ದಾರೆ.
ನವದೆಹಲಿಯ ಜಂತರ್ ಮಂತರ್ ನಲ್ಲಿ(Delhi Jantarmantar) ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿ ತಮ್ಮವರನ್ನು ಕಳೆದುಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ ಆರರಂದು ಗೋವಾದ ನೈಟ್ ಕ್ಲಬ್(Goa NightClub) ದುರಂತದಲ್ಲಿ ಸಾವನ್ನಪ್ಪಿದ್ದ ಜೋಶಿ ಕುಟುಂಬಸ್ಥರು ಹಾಗೂ ಇತರ ಮೃತರ ಕುಟುಂಬಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು. ದೆಹಲಿಯ ಜೋಶಿ ಕುಟುಂಬದ ನಾಲ್ವರು ಸದಸ್ಯರು ಅಗ್ನಿ ಅವಗಡದಲ್ಲಿ ಮೃತಪಟ್ಟಿದ್ದರು.
ಗೋವಾದ(Goa) ಬರ್ಚ್ ಬಾಯ್ ರೋಮಿಯೊ ಲೆಮ್ ನೈಟ್ ಕ್ಲಬ್ ಮಾಲೀಕರಾದ ಗೌರವ ಲೂತ್ರಾ ಹಾಗೂ ಸೌರಭ್ ಲತ್ರಾ ರವರನ್ನು ದುರಂತ ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿದೆ. ಇವರ ಜೊತೆಗೆ ಕ್ಲಬ್ ಸಹ ಮಾಲೀಕರಾದ ಅಜಯ್ ಗುಪ್ತಾ ಮತ್ತು ಕ್ಲಬ್ ನ ನಾಲ್ವರು ವ್ಯವಸ್ಥಾಪಕರನ್ನು ಸಹ ಪೋಲಿಸರು ಜೈಲಿಗಟ್ಟಿದ್ದಾರೆ.
ಈ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಬಾರದು. ಈ ಅಗ್ನಿ ಅವಗಡದಲ್ಲಿ ಮೃತರ ಕುಟುಂಬಸ್ಥರಿಗೆ ನ್ಯಾಯ ಸಿಗುವಂತೆ ಆರೋಪಿಗಳಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜೋಶಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇದನ್ನು ಓದಿ : ರಾಜ್ಯದಲ್ಲಿ ಸಿಎಂ ಆಗಿ ಇತಿಹಾಸ ಸೃಷ್ಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಬೊಲೆರೋ ವಾಹನ ಸಂಪೂರ್ಣ ಸುಟ್ಟು ಕರಕಲು.
