ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋವಾ(Goa) : ಆರ್ಪೋರಾದ ಹಡಪಡೆಯ ನೈಟ್ ಕ್ಲಬ್ ನಲ್ಲಿ (Goa Night Club) ಸಂಭವಿಸಿದ ಭೀಕರ ಅಗ್ನಿ ದುರಂತದ ತನಿಖೆಗೆ ಗೋವಾ ಸರ್ಕಾರ(Goa Government) ಆದೇಶಿಸಿದ್ದು, ಕ್ಲಬ್ ಮಾಲೀಕರ(Club Owner) ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬೆಂಕಿಯ ದುರಂತ(Fire Tragedy) ಉಂಟಾದ ಸಂದರ್ಭದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಲೇಡಿ ಡಾನ್ಸರ್(Lady Dancer) ಓರ್ವಳು ಬದುಕಿದ್ದಾಳಾ ಇಲ್ಲವಾ ಎಂಬ ಸಂಶಯ ಉಂಟಾಗಿತ್ತು. ಆದರೆ ಕಜಕಿಸ್ತಾನ್ ಮೂಲದ ನರ್ತಕಿ ಕ್ರಿಸ್ಟಿನಾ (Dancer Kristina from Kazakhstan) ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕ್ಲಬ್ ಒಳಭಾಗದ ಮೇಲ್ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡ ತಕ್ಷಣ ಕ್ಲಬ್ ನಿಂದ (Night club) ಜನರು ಓಡಲು ಪ್ರಾರಂಭಿಸಿದರು. ಕ್ಲಬ್ ನಲ್ಲಿದ್ದ ಸಿಬ್ಬಂದಿಗಳು ಮತ್ತು ಜನರು ಪರಸ್ಪರ ಸಹಾಯ ಮಾಡಿದರು. ನನ್ನ ಮೊದಲ ಆಲೋಚನೆ ನನ್ನ ಬಟ್ಟೆ ಬದಲಾಯಿಸುವ ಕೋಣೆಗೆ(Changing Room) ಹೋಗಬೇಕು ಎಂದಿತ್ತು. ಆದರೆ ಅಲ್ಲಿನ ಸಿಬ್ಬಂಧಿ ಸದಸ್ಯರು ನನ್ನನ್ನು ತಡೆದು ಅಲ್ಲಿಗೆ ಹೋಗಬೇಡಿ ಎಂದು ಹೇಳಿದಾಗ ನನ್ನ ನಿರ್ಧಾರ ಮಾತ್ರ ನನ್ನ ಜೀವ ಉಳಿಸಿತು. ನಾನು ಮನೆಗೆ ಬಂದು ಮಗಳನ್ನು ತಬ್ಬಿಕೊಂಡಾಗ ಜೀವಂತವಾಗಿದ್ದಕ್ಕಾಗಿ ದೇವರಿಗೆ ಧನ್ಯವಾದ (Thank God)ಹೇಳಿದೆ. ಆ ದಿನ ಅಗ್ನಿ ಅವಘಡದ ಸಂದರ್ಭದಲ್ಲಿ ಅದು ನನ್ನ ಎರಡನೇಯ ಪ್ರದರ್ಶನವಾಗಿತ್ತು ಎಂದು ಆ ದುರಂತದ ಕರಾಳ ಘಟನೆಯ ಬಗ್ಗೆ ಕ್ರಿಸ್ಟಿನಾ ಹೇಳಿದ್ದಾರೆ.
ಒಳಭಾಗದಲ್ಲಿ ಬೆಂಕಿ ಹೊತ್ತಿಕೊಂಡ ತಕ್ಷಣ ಎಲ್ಲ ಲೈಟ್ ಗಳು ಆಪ್ ಆಯಿತು. ಸಂಪೂರ್ಣವಾಗಿ ಕತ್ತಲಾಯಿತು.ತಕ್ಷಣ ಹೊಗೆ ತುಂಬಿಕೊಂಡಿತ್ತು. ಜನರು ಹೊರಬರಲು ಪ್ರಯತ್ನಿಸುತ್ತಿದ್ದರು. ತಳ್ಳಾಟ. ನೂಕಾಟ ನಡೆಯಿತು. ಅದೃಷ್ಟವಶಾತ್ ನಾವು ಪಾರಾದೆವು ಎಂದು ಕೆಲವು ಕರ್ನಾಟಕ ಪ್ರವಾಸಿಗರು ಹೇಳಿದ್ದಾರೆ.
ನೈಟ್ ಕ್ಲಬ್ ನಲ್ಲಿದ್ದ 200 ಜನರು : ಉತ್ತರಗೋವಾದ(North Goa) ಆರ್ಪೋರಾದ ಬಿರ್ಚ್ ಬೈ ರೋಮಿಯೊ ಲೆನ್ ನೈಟ್ ಕ್ಲಬ್ ನಲ್ಲಿ(Night Club) ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ 25 ಜನ ಸಾವನ್ನಪ್ಪಿದ್ದಾರೆ. ಘಟನೆ ನಡೆಯುವ ಸಂದರ್ಭದಲ್ಲಿ ನೈಟ್ ಬಾರ್ ನಲ್ಲಿ ಸುಮಾರು 200 ಜನರಿದ್ದರು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ
ಘಟನೆಗೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ಪೋಲಿಸರು ಬಂಧಿಸಿದ್ದಾರೆ. ಕ್ಲಬ್ ಮಾಲೀಕ ಸೌರಭ್ ಲುಥರಾ ಹಾಗೂ ಗೌರವ ಲುಥರಾ ರವರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದು ಅವರ ಬಂಧನಕ್ಕಾಗಿ ಗೋವಾ ಪೋಲಿಸರು ಹುಡುಕಾಟ(Goa Police Searching) ನಡೆಸುತ್ತಾ ದೆಹಲಿಯತ್ತ ತೆರಳಿದ್ದಾರೆ. ಕ್ಲಬ್ ನಡೆಸಲು ಅನಧೀಕೃತವಾಗಿ ಪರವಾನಗಿ ನೀಡಿದ ಯಾವುದೇ ಅಧಿಕಾರಿಯನ್ನೂ ಬಿಡುವುದಿಲ್ಲ, ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಪ್ರಮೋದ ಸಾವಂತ್(CM Pramod Sawant) ಎಚ್ಚರಿಸಿದ್ದಾರೆ.
ಈ ಮಧ್ಯೆ ರೋಮಿಯೊ ಲೇನ್ ರವರ ವಾಗಾತೋರ್ ನಲ್ಲಿನ ಕ್ಲಬ್ ಹಾಗೂ ಆಸಗಾಂವ ನಲ್ಲಿನ ಬ್ಯೂಟಿ ರೆಸಾರ್ಟ್ ನ್ನು(Beauty Resort) ತಹಶೀಲ್ದಾರ್ ಕಾರ್ಯಾಲಯದ ಅಧಿಕಾರಿಗಳು ಸೀಲ್ ಮಾಡಿದ್ದಾರೆ.
ಇದನ್ನು ಓದಿ : ಜಿಂಕೆ ಚರ್ಮ–ಕಾಡುಹಂದಿ ಮಾಂಸ ಸಾಗಾಟ. ಅರಣ್ಯ ಇಲಾಖೆ ದಾಳಿ. ಐವರು ಆರೆಸ್ಟ್.
ಡಿಸೆಂಬರ್ 22ರಿಂದ ಕರಾವಳಿ ಉತ್ಸವ. ಕಲಾವಿದರಿಂದ ಅರ್ಜಿ ಆಹ್ವಾನ
ಎಂಡಿಎಮ್‌ಎ ಸಾಗಾಟ ಪ್ರಕರಣ. ನಾಲ್ವರ ಬಂಧನ. 50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ
