ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಕುಟುಂಬವೊಂದು ತಮ್ಮ ಅದೃಷ್ಟದ ಕಾರನ್ನು ಸ್ಕ್ರಾಪ್ ಮಾಡುವ ಬದಲು ಹೂಳಲು ಮುಂದಾಗಿದೆ. ಸಂಸ್ಕಾರಕ್ಕೂ ಮುನ್ನ ಕಾರನ್ನು ಹೂವಿನಿಂದ ಅಲಂಕರಿಸಿ ಡಿಜೆ ಮತ್ತು ಸಂಗೀತ ವಾದ್ಯ ಗಳೊಂದಿಗೆ ಕಾರನ್ನು ಸಮಾಧಿಗೆ ಕೊಂಡೊಯ್ದು ಮೆರವಣಿಗೆ ನಡೆಸಿರುವ ಸಂಗತಿ ಗುಜರಾತಿನಲ್ಲಿ ವರದಿಯಾಗಿದೆ.
ಗುಜರಾತ್‌ನ ಅಮೇಲಿ ಜಿಲ್ಲೆಯ ಪಾದರ್‌ಸಿಂಗ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿ, ರೈತ ಸಂಜಯ್ ಪೋರ್ಲಾ ಈ ವಿಶಿಷ್ಟ ಶೈಲಿಯಲ್ಲಿ ನವೆಂಬರ್ 7 ರಂದು ಕಾರಿಗೆ ಕೊನೆಯ ವಿದಾಯ ಹೇಳಿದರು. ಕಾರು ಸಮಾಧಿ ಮಾಡಲು 10 ಅಡಿಗೂ ಹೆಚ್ಚು ಆಳದ ಹೊಂಡ ತೋಡಲಾಗಿತ್ತು. ಇದಕ್ಕಾಗಿ 4 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ನಾನು ಈ ಕಾರನ್ನು ಓಡಿಸುತ್ತಿದ್ದೇನೆ ಎಂದು ಸಂಜಯ್ ಪೋರ್ಲಾ ಮಾಧ್ಯಮವೊಂದಕ್ಕೆ ತಿಳಿಸಿದರು. 2014 ರಲ್ಲಿ ಅವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದರು. ಕಾರು ಖರೀದಿಸಿದ ನಂತರ, ಅವರ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸಲು ಪ್ರಾರಂಭಿಸಿತು. ಹಳ್ಳಿಯಲ್ಲಿ ಕೃಷಿಯ ಜೊತೆಗೆ ಇವರ ವ್ಯಾಪಾರವೂ ಹೆಚ್ಚಾಯಿತು.
ಹೀಗಾಗಿ ಗೌರವಯುತವಾಗಿ ಕಾರನ್ನು ಬೀಳ್ಕೊಡುವ ನಿರ್ಧಾರಕ್ಕೆ ಬಂದರು. ಸಮಾಧಿಗೂ ಮುನ್ನ ಬುಧವಾರ ರಾತ್ರಿ ಭೋಜನವನ್ನೂ ಏರ್ಪಡಿಸಲಾಗಿತ್ತು. ಸಂಜಯ ಭಾಯಿ ಪೋಲಾರ ಅವರು ಇಡೀ ಗ್ರಾಮದ ಜನರನ್ನು ಆಹ್ವಾನಿಸಿದರು. ಅತಿಥಿಗಳು ಮತ್ತು ಗ್ರಾಮಸ್ಥರು ಸೇರಿದಂತೆ ಸುಮಾರು 1500 ಜನರು ಔತಣಕೂಟದಲ್ಲಿ ಭಾಗವಹಿಸಿದ್ದರು.
ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಗಣ್ಯರು, ನನ್ನ ಜೀವನದಲ್ಲಿ ನಾನು ಈ ರೀತಿಯದ್ದನ್ನು ನೋಡಿಲ್ಲ, ಕೇಳಿಲ್ಲ ಎಂದರು. ತಮ್ಮ ಅದೃಷ್ಟದ ಕಾರಿನ ಸ್ಮರಣೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳಲು, ಕಾರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಮರವನ್ನು ನೆಡಲು ಈ ನಿರ್ಧರಿಸಿದ್ದೇನೆ ಎಂದು ಸಂಜಯ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ಮಹಿಳೆಯರ ಅಳತೆ ಪುರುಷ ಮಾಡುವ ಹಾಗಿಲ್ಲ.
ಸರ್ಕಾರಿ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ
ಬೇಲೆಕೇರಿ ಪ್ರಕರಣ. ಸಿಬಿಐ ಗೆ ಹೈಕೋರ್ಟ್ ನೋಟೀಸ್