ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿರುವ  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DCM D K Shivkumar) ಅವರು ಶುಕ್ರವಾರ ಉತ್ತರಕನ್ನಡ ಜಿಲ್ಲೆಯ ಗೋಕರ್ಣ(Gokarn) ಮತ್ತು‌ ಆಂದ್ಲೆ ಗ್ರಾಮಕ್ಕೆ(Andle  Village) ಭೇಟಿ ನೀಡಿದರು.

ಗೋಕರ್ಣದ ಮಹಾಗಣಪತಿ(Gokarn Mahaganapati) ಮತ್ತು ಮಹಾಬಲೇಶ್ವರ ದೇವಾಲಯಕ್ಕೆ(Mahabaleshwar Temple) ಭೇಟಿ ನೀಡಿದ ಅವರು ವಿಶೇಷ ಪೂಜೆ(Special Pooja) ಸಲ್ಲಿಸಿದರು. ಈ ವೇಳೆ ಮಹಾಗಣಪತಿ ದೇವರು ಹೂವಿನ ಪ್ರಸಾದ(Flower Prasada) ನೀಡುವ ಮೂಲಕ ಅಭಯ ನೀಡಿತು. ಬಳಿಕ ಅಂಕೋಲಾದ ಆಂದ್ಲೆ ಗ್ರಾಮದ ಶ್ರೀ ಜಗದೀಶ್ವರಿ ದೇವಸ್ಥಾನದಲ್ಲಿ(Andle  Sri Jagadeeshwari Temple) ಸುಮಾರು ಒಂದೂವರೆ ತಾಸುಗಳ  ಕಾಲ ಪೂಜೆ ಮತ್ತು  ಅಭಯ ಪ್ರಶ್ನೆಗಳನ್ನು ಕೇಳಿದ್ದಾರೆ.  ಈ ಸಂದರ್ಭದಲ್ಲಿ ತಾಯಿ ಸಕಾರಾತ್ಮಕವಾದ ಉತ್ತರ(Positive Answer) ನೀಡುವ ಮೂಲಕ  ಡಿ ಕೆ ಶಿವಕುಮಾರ್(D K Shivakumar) ಅವರ ಧೈರ್ಯವನ್ನ ಹೆಚ್ಚಿಸಿದೆ. ಈ ಬಗ್ಗೆ ಸ್ವತಃ ಡಿಕೆ ಅವರೆ  ಹಸನ್ಮುಖರಾಗುವಂತೆ ಆಗಿದೆ ಎಂದಿದ್ದಾರೆ.

ಡಿ ಕೆ ಶಿವಕುಮಾರ್ ಅವರ ಟೆಂಪಲ್ ರನ್(Temple Run) ಭೇಟಿ  ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ​ಅಂಕೋಲಾದ ಆಂದ್ಲೆ ಗ್ರಾಮದ ಶ್ರೀ ಜಗದೀಶ್ವರಿ ಅಮ್ಮನವರ ಸನ್ನಿಧಿಗೆ ಭೇಟಿ ನೀಡಿದ ಡಿಸಿಎಂ ಅವರು  ದೇವಿಯ ಮುಂದೆ ಒಂದುವರೆ ತಾಸುಗಳ ಸಮಯ ಕಳೆದರು. ಅರ್ಚಕರು ಮತ್ತು‌ ಡಿಕೆ ಶಿವಕುಮಾರ್ ಅವರು ಮಾತ್ರ  ದೇವಸ್ಥಾನದಲ್ಲಿ ಕುಳಿತು ಅರ್ಚಕರ ಮೂಲಕ ‘ಪ್ರಶ್ನಾ ಕಾರ್ಯ’ ನಡೆಸಿದರು. ಬಳಿಕ ದೇವರ ಸಾನಿಧ್ಯದಲ್ಲಿರುವ ತುಳಸಿ ಹಾಗೂ ನಾಗದೇವರಿಗೆ  ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್,   ಹಿಂದೆ ಕುಟುಂಬದ ಕೆಲಸಕ್ಕಾಗಿ ಇಲ್ಲಿಗೆ ಬಂದು ಪ್ರಾರ್ಥಿಸಿದ್ದೆ, ಅದು ಈಡೇರಿದೆ. ಹಾಗಾಗಿ ಮತ್ತೆ ಬರುತ್ತೇನೆ ಎಂದು ಹರಕೆ ಹೊತ್ತಿದ್ದೆ, ಇಂದು ಬಂದಿದ್ದೇನೆ. ತಾಯಿ ಮತ್ತೆ ಆಶೀರ್ವಾದ ಮಾಡಲಿ ಎಂದು ಕೇಳಿಕೊಂಡಿದ್ದೇನೆ,” ಎಂದರು.

​ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiha) ಅವರು ಸದನದಲ್ಲಿ ‘ನಾನೇ ಐದು ವರ್ಷ ಸಿಎಂ’ ಎಂದು ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ  ಅವರು ​”ನಾನು ಯಾವತ್ತೂ ಅವರು ಐದು ವರ್ಷ ಇರಲ್ಲ ಎಂದು ಹೇಳಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತಿದೆ. ಹೈಕಮಾಂಡ್ ಸಿಎಂ ಪರವಾಗಿ ಇರುವುದರಿಂದಲೇ ಅವರು ಆ ಸ್ಥಾನದಲ್ಲಿದ್ದಾರೆ. ನಮ್ಮಲ್ಲಿ ಒಪ್ಪಂದವಾಗಿದೆ, ಅದರಂತೆ ನಡೆದುಕೊಳ್ಳುತ್ತೇವೆ. ನಾವಿಬ್ಬರೂ ಈ ಬಗ್ಗೆ ಮಾತನಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

​ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ಮತ್ತೆ ಬರ್ತೀರಾ  ಎಂಬ ಪ್ರಶ್ನೆಗೆ ಡಿಕೆಶಿ ಯಾವುದೇ ಮೌಖಿಕ ಉತ್ತರ ನೀಡದೆ, ಕೇವಲ ಸಾರ್ಥಕ ಭಾವದ ಮುಗುಳುನಗೆ ಬೀರುತ್ತಾ ಅಲ್ಲಿಂದ ನಿರ್ಗಮಿಸಿದರು.

ಜಗದೀಶ್ವರಿ ದೇವಸ್ಥಾನದ ಅರ್ಚಕರಾದ ಗಣೇಶ್ ನಾಯ್ಕ  ಮಾತನಾಡಿ, “ಡಿ.ಕೆ ಶಿವಕುಮಾರ್ ಅವರಿಗೆ ದೇವಿ ಜಗದೀಶ್ವರಿ ಪ್ರಸಾದ ನೀಡಿದ್ದಾಳೆ. ಅವರ ಮನಸ್ಸಿನ ಇಷ್ಟಾರ್ಥಗಳು ಸಿದ್ಧಿಯಾಗಲಿವೆ. ಅವರು ದೇವಿಯ ಮುಂದೆ ಯಾವ ಪ್ರಶ್ನೆ ಇಟ್ಟಿದ್ದಾರೆ ಎಂದು ಹೇಳಲಾಗದು, ಆದರೆ ಒಂದು ತಿಂಗಳ ನಂತರ ಮತ್ತೆ ಬರುವುದಾಗಿ  ಹೇಳಿದ್ದಾರೆ. ಆಗ ಮತ್ತೆ ಬೇರೆ ಬೇರೆ ಪೂಜೆ ಸಲ್ಲಿಸುತ್ತಾರೆಂದು   ತಿಳಿಸಿದರು.
ಇದನ್ನು ಓದಿ : ಕಾರವಾರ ಕಡಲ ತೀರದಲ್ಲಿ ಅನುಮಾನಾಸ್ಪದ ಹಕ್ಕಿ. ಫಾರೆನ್ಸಿಕ್ ಪರೀಕ್ಷೆಗೆ ರವಾನೆಯಾದ ಡಿವೈಸ್.

ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಚಿನ್ನದ ಸರ ಕಳ್ಳತನ.