ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಉತ್ತರಕನ್ನಡ (Uttarakannada) :  ದೆಹಲಿ ವಿಧಾನಸಭಾ ಚುನಾವಣೆಯಲ್ಲಿ(Delhi MLA Election) ಭಾರತೀಯ ಜನತಾ ಪಕ್ಷ ಅಮೋಘ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ (BJP Workers Celebration) ಮಾಡಿದ್ದಾರೆ. ಹಬ್ಬದ ರೀತಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ಖುಷಿ ಪಡುತ್ತಿದ್ದಾರೆ.

ಕಾರವಾರದ(Karwar)  ಸವಿತಾ ಸರ್ಕಲ್ ನಲ್ಲಿ ಭಾರತೀಯ ಜನತಾ ಪಕ್ಷದ  ಮಂಡಲದಿಂದ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿಯ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಪಟಾಕ್ಷಿಗಳನ್ನು ಸಿಡಿಸಿ, ಸಿಹಿ ವಿತರಿಸಿ, ಕಾರ್ಯಕರ್ತರು ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ದೆಹಲಿ ಮತದಾರರಿಗೆ (Dehali Voters) ಜೈಕಾರ ಹಾಕಲಾಯಿತು.  ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ(Roopali S Naik)  ಮಾತನಾಡಿ, ದೆಹಲಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ  ಜೆ.ಪಿ.ನಡ್ಡಾ, ಎಲ್ಲ ನಾಯಕರು, ಕಾರ್ಯಕರ್ತರು, ಬೇರೆ ಬೇರೆ ರಾಜ್ಯಗಳಿಂದ ಹೋಗಿ ಪ್ರಚಾರ ನಡೆಸಿದವರು ಹಾಗೂ ದೆಹಲಿಯ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪಂಚಾಯತ್ ಸದಸ್ಯ ಸುನಿಲ್ ಸೋನಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ, ನಗರಸಭೆ ಅಧ್ಯಕ್ಷರಾದ ರವಿರಾಜ್ ಅಂಕೋಲೆಕರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ್,  ನಗರ ಪ್ರಧಾನ ಕಾರ್ಯದರ್ಶಿ  ದೇವದಾಸ್ ಕಂತರೀಕರ್, ಅಶೋಕ್ ಗೌಡ, ಮಹಿಳಾ ಮೋರ್ಚಾದ ವೈಶಾಲಿ ತಾಂಡೇಲ್, ಕಲ್ಪನಾ ನಾಯ್ಕ, ಪರ್ಬತ್ ನಾಯ್ಕ್, ನಗರ ಹಿಂದುಳಿದ ವರ್ಗದ ಅಧ್ಯಕ್ಷರಾದ ದೇವದಾಸ್ ನಾಯ್ಕ, ನಯನಾ ನಿಲಾವರ್, ಸಂದೇಶ್ ಶೆಟ್ಟಿ, ಗಣಪತಿ ಗುನಗಿ, ಅಶೋಕ್ ಕಾಮತ್ ಹಾಗೂ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಭಟ್ಕಳದ (Bhatkal) ಸಂಶುದ್ದಿನ್ ವೃತ್ತದಲ್ಲಿ ಸೇರಿದ ಬಿಜೆಪಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪ್ರಧಾನಿ ಮೋದಿ ಪರ ಘೋಷಣೆ ಕೂಗಿದರು.
ಶಿರಸಿಯ ಅಂಚೆ ವೃತ್ತದಲ್ಲಿ(Sirsi Post Circle) ಬಿಜೆಪಿ ಕಾರ್ಯಕರ್ತರು(Bjp workers) ವಿಜಯೋತ್ಸವ ಆಚರಿಸಿದರು. 48 ಸ್ಥಾನ ಪಡೆದು ದೆಹಲಿಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಕ್ಕೆ ಸಂತಸ ಪಟ್ಟರು. ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ(Kumta MLA Dinakara Shetti)  ಅವರ ನೇತೃತ್ವದಲ್ಲಿ  ಸಂಭ್ರಮಾಚರಣೆ ಮಾಡಲಾಯಿತು. ಮುಂಡಗೋಡಿನಲ್ಲೂ(Mundagodu) ಸಹ ಬಿಜೆಪಿ ಕಾರ್ಯಕರ್ತರು ಗೆಲುವಿಗೆ ಖುಷಿಪಟ್ಟು ವಿಜಯದ ಉತ್ಸವ ನಡೆಸಿದರು.

ಇದನ್ನು ಓದಿ : ಮನೆಯ ಅಂಗಳದಲ್ಲಿದ್ದ ಅಡಿಕೆ ಚೀಲ ಕದ್ದ ಕಳ್ಳ ಪೊಲೀಸರಿಗೆ ಸಿಕ್ಕಿ ಬಿದ್ದ.

ದೆಹಲಿಯಲ್ಲಿ ಬಿಜೆಪಿಗೆ ಗದ್ದುಗೆ. ಆಪ್ ಮನೆಗೆ. ಕಾಂಗ್ರೆಸ್ ಮತ್ತೆ ಸೋಲಿಗೆ.

ರಸ್ತೆಯಲ್ಲಿ ನಿಂತು ದರೋಡೆಗೆ ಇಳಿದ ಗ್ಯಾಂಗ್ ಆರೆಸ್ಟ್.

ಕಳ್ಳಾಟದಿಂದ ಇಲಾಖೆ ಮರ್ಯಾದೆ ಕಳೆಯುತ್ತಿದ್ದ ಪೊಲೀಸ್ ಸಸ್ಪೆಂಡ್.