ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಗೋಕರ್ಣ(Gokarn): ಉತ್ತರಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರವಾದ ಗೋಕರ್ಣದಲ್ಲಿ ಹಿರಿಯ ನಟಿ(Senior Actress) ಭಾರತೀ ವಿಷ್ಣುವರ್ಧನ್(Bharati Vishnuvarfhan) ಭೇಟಿ ನೀಡಿ  ದೇವರ ದರ್ಶನ ಪಡೆದರು.

ಇದಕ್ಕೂ  ಮೊದಲು ಮಹಾಗಣಪತಿ ಮಂದಿರಕ್ಕೆ(Mahaganapati Temple) ತೆರಳಿ ಪೂಜೆ ಸಲ್ಲಿಸಿ ನಂತರ ಮಹಾಬಲೇಶ್ವರ ಮಂದಿರಕ್ಕೆ(Mahabaleshwar Temple) ಆಗಮಿಸಿದರು. ಮಹಾಬಲೇಶ್ವರ ಮಂದಿರದಲ್ಲಿ ಆತ್ಮಲಿಂಗದ(Aatmalinga) ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ದೇವಾಲಯದ ವತಿಯಿಂದ ಭಾರತೀ ವಿಷ್ಣುವರ್ಧನ್(Bharati Vishnuvardhan) ಅವರಿಗೆ ಪ್ರಸಾದ ನೀಡಿ ಗೌರವಿಸಲಾಯಿತು.

ಈ ವೇಳೆ ಭಕ್ತರು(Devotees) ಮತ್ತು ನಾಗರಿಕರು ತಮ್ಮ ಪ್ರಿಯ ನಟಿಯನ್ನು ನೋಡಿ ಸಂತಸಗೊಂಡು ಅವರ ಜೊತೆ ಫೋಟೋ ತೆಗೆಯಲು ಮುಗಿ ಬಿದ್ದರು. ಭಾರತೀ ವಿಷ್ಣುವರ್ಧನ್ ಅವರು ಸಹ ಎಲ್ಲರೊಂದಿಗೆ ಸ್ನೇಹಪೂರ್ಣವಾಗಿ ಮಾತನಾಡಿ ಫೋಟೋಗಳಿಗೆ ಪೋಸ್ ನೀಡಿದರು.

ಖ್ಯಾತ ನಟ ದಿ. ಡಾ. ವಿಷ್ಣುವರ್ಧನ್ ಅವರ ಪತ್ನಿಯಾದ ಭಾರತೀ ವಿಷ್ಣುವರ್ಧನ್ ಅವರ ಗೋಕರ್ಣ ಭೇಟಿ(Gokarn Visit) ಭಕ್ತರಲ್ಲಿ ವಿಶೇಷ ಸಂಭ್ರಮ ಮೂಡಿಸಿತು.

ಇದನ್ನು ಓದಿ : ಭಟ್ಕಳದಲ್ಲಿ ಮನೆ ಮೇಲೆ ದಾಳಿ. ಕಾಡುಕೋಣ ಮಾಂಸ ಪತ್ತೆ. ಆರೋಪಿ ಎಸ್ಕೇಪ್.

ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ಹಲವರಿಗೆ ಗಂಭೀರ ಗಾಯ