ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಮುಂಬೈನಿಂದ ಭಟ್ಕಳಕ್ಕೆ(Mumbai to Bhatkal) ಬಂದ ಖಾಸಗಿ ಬಸ್ ನಲ್ಲಿ ಬಂದ  ಪಾರ್ಸೆಲ್ ನಲ್ಲಿ ಲಕ್ಷಾಂತರ ರೂ. ಹಣ ಮತ್ತು ಬಂಗಾರದ ಬಳೆಗಳು ಇದ್ದ ಮಾಹಿತಿಯನ್ನ ಭಟ್ಕಳ ಪೊಲೀಸರು ಬಯಲಿಗೆಳೆದ ಘಟನೆ ನಡೆದಿದೆ.

ಖಚಿತ ಮಾಹಿತಿ ಪಡೆದ ಭಟ್ಕಳ ಶಹರ ಠಾಣೆ(Bhatkal Town Station) ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವನಿಗಾಗಿ ಶೋಧ ನಡೆಸಿದ್ದಾರೆ.

ಮಂಗಳವಾರ  ಮುಂಬೈನಿಂದ ಭಟ್ಕಳ ಮಾರ್ಗವಾಗಿ(Bhatkal Route) ಮಂಗಳೂರಿಗೆ ತೆರಳುತಿದ್ದ  ಖಾಸಗಿ ಬಸ್ ಗೆ ಮುಂಬೈ ನಲ್ಲಿ  ವ್ಯಕ್ತಿಯೊಬ್ಬರು ಪಾರ್ಸೆಲ್ ಒಂದನ್ನ ಕಳಿಸಿದ್ದರು.  ಭಟ್ಕಳದಲ್ಲಿ(Bhatkal) ಓರ್ವರು ತೆಗೆದುಕೊಳ್ಳುತ್ತಾರೆ ಎಂದಿದ್ದರು. ಖಚಿತ ಮಾಹಿತಿ ಪಡೆದ  ಭಟ್ಕಳ ಶಹರ ಠಾಣೆ ಸಿಪಿಐ ದಿವಾಕರ್(CPI Divakar) ರವರು ಭಟ್ಕಳದ ವೈಭವ ಲಾಡ್ಜ್ ಬಳಿ  ತಮ್ಮ ಸಿಬ್ಬಂದಿಗಳೊಂದಿಗೆ ಕಾದು ಕುಳಿತಿದ್ದರು. ಬಸ್ ಬರುತ್ತಿದ್ದಂತೆ ಬಾಬಣ್ಣ ಎಂಬಾತ ಪಾರ್ಸೆಲ್ ಇಳಿಸಿಕೊಂಡು  ಆಟೋದಲ್ಲಿ ಸಾಗಿದ. ಬೆನ್ನತ್ತಿದ ಪೊಲೀಸರು ಉಸ್ಮಾನ್ ನಗರ(Usman nagar) ಬಳಿ ಆಟೋ ನಿಲ್ಲಿಸಿದ್ದಾರೆ. ಪಾರ್ಸೆಲ್ ಒಪನ್  ಮಾಡಿಸಿದಾಗ ಲಕ್ಷಾಂತರ ರೂ. ಹಣ  ಮತ್ತು ಬಂಗಾರದ ಆಭರಣ ಪತ್ತೆಯಾಗಿದೆ.

ಒಟ್ಟು 49ಲಕ್ಷ 98ಸಾ.400 ರೂ. ಮತ್ತು 401.04 ಗ್ರಾಮ್  ಬಂಗಾರದ ಬಳೆ ಇದ್ದವು. ಈ ಸಂದರ್ಭದಲ್ಲಿ ಮೂವರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಉಸ್ಮಾನ್ ನಗರದ ಮೊಹ್ಮದ್ ಇರ್ಫಾನ್ ಮತ್ತು ಇನ್ನೋರ್ವನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಘಟನೆ ಸಂಬಂಧ ಭಟ್ಕಳ ಶಹರ ಠಾಣೆಯಲ್ಲಿ(Bhatkal Town Station) ಐಟಿ ಆಕ್ಟ್ ನಡಿ ಪ್ರಕರಣ ದಾಖಲಾಗಿದ್ದು ಮೇಲ್ನೋಟಕ್ಕೆ ಇದು ಹವಾಲ ಹಣ ಎಂಬುದು ಗೊತ್ತಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ಹೊನ್ನಾವರ ವಾಣಿಜ್ಯ ಬಂದರು ಯೋಜನೆ. ಸಿಎಂ ಭೇಟಿಯಾದ ಖ್ಯಾತ ಪರಿಸರವಾದಿ ಮೇದಾ ಪಾಟ್ಕರ್.

ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ವೈಭವ. ಮೀನುಗಾರಿಕಾ ಬಲೆಗೆ ಸಿಕ್ಕ ಮೀನಿನ‌ ರಾಶಿ.