ಭಟ್ಕಳ(BHATKAL) : ಇತ್ತೀಚಿನ ದಿನಗಳಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘಿಸಿದಕ್ಕೆ ಸಂಬಂಧಪಟ್ಟ ಸವಾರರಿಗೆ ಪೊಲೀಸ್ ಇಲಾಖೆ (POLICE DEPARTMENT) ಚಾಟಿ ಏಟು ಬೀಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಸಂಚಾರ ನಿಯಮ ಪಾಲಿಸಲು ಸವಾರರು ಮುಂದಾಗುತ್ತಾರೆ.
ಆದರೆ ಕೆಲ ಪೊಲೀಸ್ ಅಧಿಕಾರಿಗಳು ಇಲಾಖೆಗೆ, ಪ್ರಾಮಾಣಿಕ ಅಧಿಕಾರಿಗಳಿಗೆ ಕೆಟ್ಟ ಹೆಸರು ತರುತ್ತಿರುವುದು ಖೇದಕರವಾಗಿದೆ. ಭಟ್ಕಳದಲ್ಲಿ ಹೆಲ್ಮೆಟ್(HELMET) ರಹಿತ ದಂಡದ ಹಣ ಪೊಲೀಸ್ ಇಲಾಖೆಯ ಖಾತೆಯ ಬದಲು ಚಿನ್ನದ ವ್ಯಾಪಾರಿಯ(GOLD MERCHANT) ಖಾತೆಗೆ ವರ್ಗಾವಣೆಯಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಭಟ್ಕಳ ನಗರದಲ್ಲೂ ಸಹ ಸಂಚಾರ ನಿಯಮ (TRAFFIC RULES) ಉಲ್ಲಂಘಿಸುವವರು ಹೆಚ್ಚಾಗಿದ್ದಾರೆ. ಹೀಗಾಗಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ತುಂಬಾ ಆಕ್ಟಿವ್ ಆಗಿದ್ದಾರೆ. ಪ್ರತಿ ದಿನ ಸಾಕಷ್ಟು ವಾಹನ ಸವಾರರಿಗೆ ದಂಡ ವಿಧಿಸುತ್ತಾರೆ. ಹೆಲೈಟ್ ತಪಾಸಣೆಯ ದಂಡ ಪಾವತಿಯ ಹಣವೆ ಜಾಸ್ತಿಯಾಗುತ್ತದೆ. ಮ್ಯಾಟರ್ ಏನಂದ್ರೆ ದಂಡದ ಹಣ ಇಲಾಖೆಯ ಖಾತೆಗೆ ಜಮಾ ಆಗುವ ಬದಲು ಅಧಿಕಾರಿಯ ಪರಿಚಯಸ್ಥರೋರ್ವರ (ಚಿನ್ನದ ವ್ಯಾಪಾರಿ) ಖಾತೆಗೆ ವರ್ಗವಾಗುತ್ತಿದೆ.
ಕಳೆದ ಹಲವು ದಿನಗಳಿಂದ ಸಾರ್ವಜನಿಕರಿಂದ ಈ ಬಗ್ಗೆ ದೂರು ಬಂದಿತ್ತು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಯೋರ್ವರೂ ಬಯಲಿಗೆಳೆಯಲು ಮುಂದಾದರು.
ನಗರ ಠಾಣೆಯ (TOWN STATION) ರಸ್ತೆಯ ಎದುರಿನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿಗಳು ದ್ವಿಚಕ್ರ ವಾಹನ ನಿಲ್ಲಿಸುವಂತೆ ಸೂಚಿಸಿದರು. ಪೊಲೀಸ್ ಸಿಬ್ಬಂದಿ ಸೂಚನೆಯಂತೆ ಪ್ರತಿನಿಧಿ ಠಾಣೆಯ ಆವರಣದಲ್ಲಿ ನಿಂತಿದ್ದ ಪಿಎಸೈ ಯಲ್ಲಪ್ಪ ಬಳಿ ತೆರಳಿದರು. ದಂಡ 500 ರೂ. ಕಟ್ಟುವಂತೆ ಪಿಎಸ್‌ಐ ಸೂಚಿಸಿದಾಗ ನಗದು ಬದಲಿಗೆ ಆನ್ ಲೈನ್ ಮೂಲಕ ಹಣ ಪಾವತಿಸುವುದಾಗಿ ತಿಳಿಸಲಾಯಿತು.
ಆಗ ಪಿಎಸ್‌ಐ (PSI) ಯಲ್ಲಪ್ಪ ಅವರು ಮೊಬೈಲ್ ನಂಬರ್ ಒಂದನ್ನು ನೀಡಿದರು. ಅದಕ್ಕೆ ಹಣ ವರ್ಗಾಯಿಸುವಂತೆ ಸೂಚಿಸಿದಾಗ ಹಣ ಟ್ರಾನ್ಸಪರ್ ಆಯಿತು. ಅದೇ ರೀತಿ ಅಲ್ಲಿಯೇ ಇದ್ದ ಇನ್ನೂ ಹಲವು ವಾಹನ ಸವಾರರು ಅದೇ ನಂಬರಗೆ ದಂಡದ ಹಣವನ್ನು ವರ್ಗಾಯಿಸಿದ್ದಾರೆ.
ಹಣ ವರ್ಗಾಯಿಸಿದ ಖಾತೆದಾರರ ಹೆಸರು ಭಟ್ಕಳದ ಚಿನ್ನದ ವ್ಯಾಪಾರಿಯದ್ದಾಗಿರುವುದು ಕಂಡು ಬಂತು. ಆದರೆ ಆತನಿಗೆ ಮತ್ತು ಪೊಲೀಸ್ ಅಧಿಕಾರಿಗೆ ಏನು ಸಂಬಂಧ ಎಂಬ ಪ್ರಶ್ನೆ ಭಟ್ಕಳ ಜನತೆಗೆ ಕಾಡುತ್ತಿದೆ. ಖಾಸಗಿ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ ಆದ ಮೇಲೂ ಇಲಾಖೆಯ ಚಲನ್ ಕೊಡ್ತಾರಲ್ಲ? ಇದು ಹೇಗೆ ಸಾಧ್ಯ? ಹಾಗಾದರೆ, ಚಲನ್ ಕೂಡ ನಕಲಿಯೇ ಎಂಬ ಅನುಮಾನ ಕಾಡಿದೆ. ಈ ರೀತಿ ದಂಡದ ಹಣವು ದುರ್ಬಳಕೆಯಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಗಮನ ಹರಿಸಬೇಕಿದೆ.
ಭಟ್ಕಳದ ಪೊಲೀಸ ಇಲಾಖೆಯಿಂದ ಕಳೆದ ಒಂದು ತಿಂಗಳಿನಿಂದ ನಗರದ ವಿವಿಧಡೆ ದ್ವಿಚಕ್ರ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಆಗುತ್ತಿದ್ದರೆ, ಇನ್ನು ಕೆಲವು ಕಡೆ ವಾಹನ ಸವಾರರಿಂದ ದಂಡ ಪಾವತಿಸಿಕೊಂಡ ಹಣದ ದುರ್ಬಳಕೆ ಕೆಲಸ ಜೋರಾಗಿ ನಡೆಯುತ್ತಿದೆ. ಹೆಲೈಟ್ ಧರಿಸದವರಿಂದ ಆನ್ ಲೈನ್ ಮೂಲಕ ಹಣ ಪಾವತಿಸಲು ಇಲಾಖೆಯ ಆನ್ಲೈನ್ ಸ್ಕ್ಯಾನರ್ ಇಲ್ಲವೇ ಎಂಬ ಪ್ರಶ್ನೆ ಇದೆ.
ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಲೋಪ ಏಸಗುವ ಅಧಿಕಾರಿಗಳ ಹಕಿಕತ್ ಏನೆಂದು ತಿಳಿದು ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆಂಬ ನಿರೀಕ್ಷೆ ಇದೆ.
ಇದನ್ನು ಓದಿ : ಶ್ರಾವಣದಲ್ಲಿ ಮಹಿಳೆಯರ ಭಕ್ತಿ.
ಹಾರವಾಡದಲ್ಲಿ ಹಾರಿ ಹೋಯಿತು ಬದುಕು.