ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರು ಬೈಕ್ ಸವಾರರ ನಡುವೆ ಜಗಳ ವಿಕೋಪಕ್ಕೆ ತಿರುಗಿ ಓರ್ವನಿಗೆ ಚಾಕುವಿನಿಂದ ತಿವಿದ ಘಟನೆ ತಾಲೂಕಿನ ಕುದ್ರಿಗಿ ತೂಗು ಸೇತುವೆ(Kudrigi Hanging Bridge) ಬಳಿ ನಡೆದಿದೆ.
ಘಟನೆಯಲ್ಲಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಕುದ್ರಿಗಿ ನಿವಾಸಿ ವಿವೇಕ ನಾಯ್ಕ ಗಾಯಗೊಂಡು ಉಡುಪಿ(Udupi) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸಂಶಿಯ ಅದ್ನಾನ್ ನನ್ನ ಪೊಲೀಸರು ಬಂಧಿಸಿದ್ದಾರೆ.
ಬೈಕ್ ನಲ್ಲಿ ತೆರಳುವ ವೇಳೆ ಸೈಡ್ ಬಿಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಘಟನೆ ನಡೆದಿದೆ. ಘಟನೆ ನಡೆದ ತಕ್ಷಣ ಸಾರ್ವಜನಿಕರು ಹಾಗೂ ಹೊನ್ನಾವರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆ ಖಂಡಿಸಿ ನಾಗರಿಕರು ಠಾಣೆಯಲ್ಲಿ ಜಮಾಯಿಸಿದರು. ಹೊನ್ನಾವರ ಪೊಲೀಸ್ ಠಾಣೆಯಲ್ಲಿ(Honnavar Police Station) ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ಇದನ್ನು ಓದಿ : ಅಂಕೋಲಾದಲ್ಲಿ ಭೀಕರ ಅಪಘಾತ. ಇಬ್ಬರ ದುರ್ಮರಣ.
ಭಟ್ಕಳದಲ್ಲಿ ಜಾನುವಾರು ಕಟಾವು ಮಾಡಿದ ದುರುಳರು. ಇಬ್ಬರಿಗೆ ಹೆಡೆಮುರಿ ಕಟ್ಟಿದ ಪೊಲೀಸರು.
ಕಡಲತೀರದಲ್ಲಿ ತಟರಕ್ಷಕ ಪಡೆಗೆ ಜಾಗ ನೀಡಬೇಡಿ. ಮೀನುಗಾರರಿಂದ ಜಿಲ್ಲಾಧಿಕಾರಿಗೆ ಮನವಿ.
ಜಾತಿಗಣತಿಯಲ್ಲಿ ಗೊಂದಲ. ಬಾಂದಿ ಎಂದು ನಮೂದಿಸಲು ಕೃಷ್ಣಾನಂದ ಬಾಂದೇಕರ ಮನವಿ.