ಮಂಗಳೂರು(Mangalore) : ಬಂಟ್ವಾಳ ತಾಲೂಕಿನ(Bantwal Taluku) ಅಮ್ಮೆಮಾರ್ (Ammemar) ಎಂಬಲ್ಲಿ ರೌಡಿ ಶೀಟರ್ ಗಳ ನಡುವೆ  ತಲ್ವಾರ್ ನಲ್ಲಿ ಕಾಳಗ ನಡೆದಿದೆ.

ಒಂದು ಕೋಮಿನ ಯುವಕರ ಗುಂಪಿನ ಮಧ್ಯೆ  ಕಾಳಗ ನಡೆದಿದ್ದು, ಪೂರ್ವದ್ವೇಷದ ಹಿನ್ನೆಲೆಯಲ್ಲಿ ಗಲಾಟೆಯಾಗಿದೆ. ನಡುಬೀದಿಯಲ್ಲಿ ಯುವಕರನ್ನ ಅಟ್ಟಾಡಿಸಿ ರೌಡಿ ಗ್ಯಾಂಗ್ ನವರು ಅಟ್ಟಹಾಸ ಮೆರೆದಿದ್ದಾರೆ.

ಘಟನೆಯಲ್ಲಿ  ಇಬ್ಬರು ಯುವಕರ ಸ್ಥಿತಿ ಗಂಭೀರವಾಗಿದೆ. ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಎಂಬುವವರ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ಮಾರಕ ದಾಳಿ ನಡೆದಿದೆ.

ಘಟನೆಯಲ್ಲಿ ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಆರೋಪಿಗಳೆಂದು ಹೇಳಲಾಗಿದೆ.

ತಸ್ಲೀಮ್ ಹಾಗೂ ಸ್ನೇಹಿತರು ಮಾತನಾಡುತ್ತಿರುವ ವೇಳೆ ತಸ್ಲೀಮ್ ಗೆ ಕರೆಯೊಂದು ಬಂದಿತ್ತು. ಈ ವೇಳೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ನಾಲ್ಕು ಮಾರ್ಗಕ್ಕೆ ಬರುವಂತೆ ಸವಾಲು ಹಾಕಿದ್ದ ಎನ್ನಲಾಗಿದೆ.ಇದೇ ಸಂದರ್ಭದಲ್ಲಿ ತಸ್ಲೀಮ್ ಹಾಗೂ ತಂಡ ಅಮ್ಮೆಮಾರ್ ಶಾಲಾ(Ammemar school) ಬಳಿಗೆ ಹೋದಾಗ ದಾಳಿ ನಡೆಸಲಾಗಿದೆ

ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ (Bantwal Rural Police Station)ಪ್ರಕರಣ ದಾಖಲಾಗಿದ್ದು ಹಳೇ ದ್ವೇಷದಿಂದ ಕರೆಸಿ ತಲವಾರಿನಿಂದ ದಾಳಿ ನಡೆಸಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ವಾಹನ ತಡೆದ ಪೊಲೀಸ್ ಸಿಬ್ಬಂದಿಯನ್ನು ಬೋನೆಟ್ ಮೇಲೆ ಹೊತ್ತೋಯ್ದ ಚಾಲಕ

ಬೆಲೆಕೇರಿ ಅದಿರು ಕಳುವು ಪ್ರಕರಣ. ಶಾಸಕ ಸತೀಶ್ ಸೈಲ್ ಬಂಧನ