ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಸಿಗ್ನಲ್ ದಾಟಿ ಬಂದ ಅಂಬುಲೆನ್ಸ್(Ambulance) ವಾಹನವೊಂದು  ಬೈಕ್‌ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಭಟ್ಕಳ ಮೂಲದ ದಂಪತಿ(Bhatkal Native Couple) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ಶಾಂತಿನಗರ(Shantinagara)  ನಡೆದಿದೆ.

ಭಟ್ಕಳದ ಮಸ್ಕತ್ ಕಾಲೋನಿಯ(Bhatkal Mascut Colony) ನಿವಾಸಿಗಳಾದ ಇಸ್ಮಾಯಿಲ್(40) ಮತ್ತು ಸಮೀನಾ(32) ಮೃತ ದುರ್ದೈವಿಗಳಾಗಿದ್ದಾರೆ.  ಟ್ರಾಫಿಕ್ ಸಿಗ್ನಲ್‌ನಲ್ಲಿ(Traffic Signal) ತಮ್ಮ ಬೈಕ್ ನಿಲ್ಲಿಸಿದ್ದ ವೇಳೆ, ವೇಗವಾಗಿ ಬಂದ ಅಂಬ್ಯುಲೆನ್ಸ್‌ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೇ ಮುಂದಿನ ಸಿಗ್ನಲ್ ಕಂಬಕ್ಕೆ ಢಿಕ್ಕಿ ಹೊಡೆದಿದ್ಧಾನೆ.  ಆಘಾತದಿಂದ ಅಂಬ್ಯುಲೆನ್ಸ್‌ ಪಲ್ಟಿಯಾಗಿದ್ದು, ಸ್ಥಳದಲ್ಲೇ ದಂಪತಿ(Couple) ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಂಬುಲೆನ್ಸ್ ನಲ್ಲಿ ಯಾವುದೇ ರೋಗಿಗಳು ಇರಲಿಲ್ಲ. ಆದರೂ ಚಾಲಕ ಸಿಗ್ನಲ್ ಮೀರಿ ಯಾಕೆ ವಾಹನ ಓಡಿಸಿದ ಎಂಬುದರ ತನುಖೆಯನ್ನ  ವಿಲ್ಸನ್ ಗಾರ್ಡನ್ ಟ್ರಾಫಿಕ್(Wilson Garden Traffic Station) ಮಾಡುತ್ತಿದ್ದಾರೆ. ಪರಾರಿಯಾದ ಚಾಲಕನನ್ನು ಪೊಲೀಸರು  ಬಂಧಿಸಿದ್ದಾರೆ.

ಮೃತ ಇಸ್ಮಾಯಿಲ್ ಮತ್ತು ಸಮೀನ್ ಬಾನು ಇಬ್ಬರೂ ಭಟ್ಕಳದವರೇ ಆಗಿದ್ದಾರೆ. ಇಸ್ಮಾಯಿಲ್ ವಸ್ತ್ರ ವ್ಯಾಪಾರದಲ್ಲಿ(Cloth Merchant) ತೊಡಗಿಸಿಕೊಂಡಿದ್ದು ಮಸ್ಕತ್ ಕಾಲೊನಿಯಲ್ಲಿ ವಾಸಿಸುತ್ತಿದ್ದರು. ಸಮೀನ್ ಬಾನು ಬುಂದರ್ ರೋಡ್ ಐದನೇ ಕ್ರಾಸ್‌ನವರು. 12 ವರ್ಷಗಳ ಹಿಂದೆ ಇವರ ವಿವಾಹವಾಗಿದ್ದು, ಕಳೆದ 9 ವರ್ಷಗಳಿಂದ ಅವರು ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ(BTM Layout) ವಾಸಿಸುತ್ತಿದ್ದರು. ಅವರಿಗೆ 10, 7 ಮತ್ತು 4 ವರ್ಷದ ಮೂವರು ಮಕ್ಕಳಿದ್ದಾರೆ.  ಈಗ ಅವರು ಅನಾಥರಾಗಿದ್ದಾರೆ.

ಬೆಂಗಳೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ  ಮೃತದೇಹಗಳನ್ನ ಭಟ್ಕಳಕ್ಕೆ ತರಲಾಗಿದೆ. ಘಟನೆಯಿಂದ ಭಟ್ಕಳ ತಂಜೀಮ್ ಸಂಸ್ಥೆ ಸಂತಾಪ(Tanzeem Organization Condolence) ಸೂಚಿಸಿದೆ.

ಇದನ್ನು ಓದಿ : ವಿದ್ಯುತ್ ಶಾಕ್ ಗೆ ಜೋಡಿಯಾನೆ ಬಲಿ. ಅರಣ್ಯ ಇಲಾಖೆಯಿಂದ ತನಿಖೆ.

ಒಂದೇ ದಿನ ಇಬ್ಬರು ಮಹಿಳಾ ಜನಪ್ರತಿನಿಧಿಗಳು ಹೃದಯಾಘಾತದಿಂದ  ಸಾವು.

ಹಾಡು ಹಾಡುತ್ತಿದ್ದಾಗ ಎಎಸ್ಐ ಹೃದಯಾಘಾತದಿಂದ ನಿಧನ.