ಭಟ್ಕಳ(Bhatkal): ಮುರ್ಡೇಶ್ವರ ಕಡಲತೀರದಲ್ಲಿ(Murdeshwar beach) ಮಂಗಳವಾರ ಸಂಜೆ ನೀರು ಪಾಲಾದ ಮೂವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ.

15 ವರ್ಷದ  ದೀಕ್ಷಾ, ಲಾವಣ್ಯ, ಲಿಪಿಕಾ ಮೃತದೇಹವನ್ನ ಪತ್ತೆ ಮಾಡುವಲ್ಲಿ ಕರಾವಳಿ ಕಾವಲು ಪಡೆ, ಲೈಫ್ ಗಾರ್ಡ್ ಮತ್ತು ಸ್ಥಳೀಯ ಮೀನುಗಾರರು ಯಶಸ್ವಿಯಾಗಿದ್ದಾರೆ. ಮುರ್ಡೇಶ್ವರ ದೇವಾಲಯ ಹಿಂಭಾಗದ ಗುಡ್ಡ ಪ್ರದೇಶದ ಸಮೀಪ  ಪತ್ತೆಯಾಗಿದೆ.

ಕೋಲಾರ(Kolar ) ಜಿಲ್ಲೆಯ ಮುಳಬಾಗಿಲು ಮುರಾರ್ಜಿ ದೇಸಾಯಿ ವಸತಿ ಶಾಲೆಯ(Mulabagilu moorarjee School) ಒಟ್ಟು   46 ವಿದ್ಯಾರ್ಥಿಗಳು  ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದರು.  ಇಬ್ಬರು ಮಹಿಳಾ ಶಿಕ್ಷಕರು, bನಾಲ್ವರು ಪುರುಷ ಶಿಕ್ಷಕರು ಹಾಗೂ  ಪ್ರಿನ್ಸಿಪಾಲ ಶಶಿಕಲಾ  ಜೊತೆಗಿದ್ದರು. ಮುರ್ಡೇಶ್ವರ ಕಡಲತೀರದಲ್ಲಿ ಆಟವಾಡುತ್ತಿರುವಾಗ ಒಟ್ಟು ಏಳು ಜನ ಸಮುದ್ರ ಪಾಲಗಿದ್ದರು. ಯಶೋಧ, ವೀಕ್ಷಣ ಹಾಗೂ ಲಿಪಿಕಾ ಎಂಬುವವರನ್ನ  ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದರು.  ಶ್ರಾವಂತಿ ಗೋಪಾಲಪ್ಪ (15) ಸಾವನ್ನಪ್ಪಿದ್ದಳು.

ಇಂದು ಬೆಳಿಗ್ಗೆಯಿಂದ ಸಮುದ್ರದಲ್ಲಿ ಮೀನುಗಾರರ ಸಹಾಯದಿಂದ ಜಸ್ಟ್ ಡ್ರೈವ್ (Just Drive) ಸ್ಕ್ಯೂಬಾ ಬೋಟ್ ಮೂಲಕ ಹುಡುಕಾಟ ನಡೆಸಲಾಗಿತ್ತು. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ(Murdeshwar Poli ce Station) ಪ್ರಕರಣ ದಾಖಲಾಗಿತ್ತು.

ಇದನ್ನು ಓದಿ : ಮುರ್ಡೇಶ್ವರ ಕಡಲತೀರದಲ್ಲಿ ದುರಂತ. ಪ್ರವಾಸಕ್ಕೆ ಬಂದ ಶಾಲಾ ವಿದ್ಯಾರ್ಥಿನಿ ಸಾವು. ಮೂವರು ನಾಪತ್ತೆ.

ಡಿಸೆಂಬರ್ 13 ರಂದು ಭಟ್ಕಳದಲ್ಲಿ  ಬೃಹತ್ ಪ್ರತಿಭಟನಾ ಸಭೆ.

ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟಕ್ಕೆ ಬೇಡಿಕೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ವಿನೂತನ ಪ್ರತಿಭಟನೆ.

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಇನ್ನೂ ನೆನಪು ಮಾತ್ರ.