ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಪಟ್ಟಣದ ಹಳೆ ಬಸ್ ನಿಲ್ದಾಣ ಸಮೀಪ ಅನಾರೋಗ್ಯದಿಂದ ಮೃತಪಟ್ಟಿದ್ದ ಭಿಕ್ಷುಕನ ಅಂತ್ಯಸಂಸ್ಕಾರವನ್ನು ರುದ್ರ ಭೂಮಿಯಲ್ಲಿ ಪೊಲೀಸರು ಹಾಗೂ ಸಮಾಜ ಸೇವಕರ ಸಮ್ಮುಖದಲ್ಲಿ ನೆರವೇರಿಸಿ ಮಾನವೀಯತೆ(Humanity) ಮೆರೆದ ಘಟನೆ ನಡೆದಿದೆ.

ಆಗಸ್ಟ್ 30ರಂದು ಅಂಗಡಿ ಮುಂಭಾಗ ಕುಳಿತ ಸ್ಥಿತಿಯಲ್ಲಿಯೇ ಭಿಕ್ಷುಕನು ಸಾವಿಗೀಡಾಗಿದ್ದ. ನಂತರ ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ(Bhatkal Government Hospital) ಸಾಗಿಸಲಾಗಿತ್ತು, ಆದರೆ ಎಂಟು ದಿನವಾದರೂ ವಾರಸುದಾರರಾರು ಬಂದಿರಲಿಲ್ಲ. ಮೃತನ ವಾರಸುದಾರರನ್ನು ಪತ್ತೆ ಹಚ್ಚಲು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಸಂಸ್ಕಾರದಲ್ಲಿ ಸಾಮಾಜಿಕ ಕಾರ್ಯಕರ್ತ  ಮಂಜು ಮುಟ್ಟಳ್ಳಿ, ಇಸ್ಮಾಯಿ ಸವುದ್ ಗವಾಯಿ, ನಗರ ಪೋಲಿಸ್ ಠಾಣೆ ಎ.ಎಸ್.ಐ ಅಂತೋನಿ ಫರ್ನಾಂಡಿಸ್, ಪೊಲೀಸ್ ಸಿಬ್ಬಂದಿ ಮಹೇಶ್ ಪಟಗಾರ್, ಆಂಬುಲೆನ್ಸ್ ಚಾಲಕ ಏವರೆಟ್ಸ್, ಪುರಸಭೆ ಪೌರ ಕಾರ್ಮಿಕರು ಹಾಜರಿದ್ದರು.

ಇದನ್ನು ಓದಿ : ಇಂದು ಆಕಾಶದಲ್ಲಿ ಖಗೋಳ ವಿಸ್ಮಯ. ರಕ್ತವರ್ಣದಲ್ಲಿ ಕಾಣಿಸಲಿದ್ದಾನೆ ಚಂದಿರ.

ಭಾವನಾ ರಾಮಣ್ಣಗೆ ಹೆಣ್ಣುಮಗು. ಐವಿಎಪ್ ಮೂಲಕ ಮಗು ಪಡೆದ ನಟಿ