ಕಾರವಾರ(KARWAR) : ದೇಶದ ಮಹತ್ವದ ಯೋಜನೆಗಾಗಿ ತಮ್ಮ ಜಮೀನುಗಳನ್ನ ತ್ಯಾಗ ಮಾಡಿದ ಕಾರವಾರ ಮತ್ತು ಅಂಕೋಲಾ(ANKOLA) ಮೀನುಗಾರರು ತೊಂದರೆ ಎದುರಿಸುತ್ತಿದ್ದಾರೆ.

ಕಾರವಾರ ತಾಲೂಕಿನ ಮುದಗಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಯಾಂತ್ರಿಕ ದೋಣಿ ಮೀನುಗಾರರ ಮೇಲೆ ನೌಸೇನಾ ಸಿಬ್ಬಂದಿಗಳು ದರ್ಪ ತೋರಿಸಿದ ಘಟನೆ ನಡೆದಿದೆ.

ಮುದಗಾ ಬಂದರಿನಿಂದ ಹೊರಟು ಮೀನಿಗಾಗಿ ಬಲೆ ಹಾಕಿದ ವೇಳೆ ಏಕಾ ಏಕಿಯಾಗಿ ದೌಡಾಯಿಸಿ ಬಂದ ನೇವಿ(NAVY) ಸಿಬ್ಬಂದಿಗಳು ಬೋಟಿನ ಬಲೆಯನ್ನ ಎಳೆದೋಯ್ದಿದ್ದಾರೆ. ಅಲ್ಲದೇ ಹಿಡಿದ ಲಕ್ಷಾಂತರ ರೂ. ಮೌಲ್ಯದ ಮೀನುಗಳನ್ನ ಹಾಳು ಮಾಡಿದ್ದರೆಂಬ ಆರೋಪ ವ್ಯಕ್ತವಾಗಿದೆ.

ದಾಮೋದರ ತಾಂಡೇಲ್ ಎಂಬುವವರಿಗೆ ಸೇರಿದ ವೀರ ಗಣಪತಿ(VEERA GANAPATI) ಹೆಸರಿನ ಬೋಟ್ ಮೀನುಗಾರಿಕೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳಿಂದ ಸಮುದ್ರ ಪ್ರಕ್ಷುಬ್ದವಾಗಿದೆ. ಹೀಗಾಗಿ ಯಾಂತ್ರಿಕ ದೋಣಿ ಮತ್ತು ಮೀನಿಗಾಗಿ ಹಾಕಿದ ಬಲೆಗಳನ್ನ ನಿಯಂತ್ರಿಸುವುದು ಕಷ್ಟ. ಇಂದು ಹಾಕಿದ ಬಲೆ ಗಳಿಗೆ ಸ್ವಲ್ಪ ದೂರ ತೇಲಿಹೋಗಿದೆ. ಹೀಗಾಗಿ ನೇವಿ ಸಿಬ್ಬಂದಿಗಳು ತಮ್ಮ ಬೋಟ್ ಮೂಲಕ ಬಂದು ಮೀನುಗಾರಿಕೆ ಬಲೆ ನಾಶ ಮಾಡಿದ್ದಾರೆ. ಹೀಗಾಗಿ ಮೀನುಗಾರರು ಕಂಗಾಲಾಗಿದ್ದು, ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.

ಈ ಹಿಂದೆಯೂ ಕೂಡ ಮೀನುಗಾರರು(FISHERMAN) ನೇವಿ ಸಿಬ್ಬಂದಿಗಳಿಂದ ತೊಂದರೆ ಅನುಭವಿಸಿದ್ದರು. ಆ ಸಂಬಂಧ ಪೊಲೀಸ್ ದೂರು ದಾಖಲಾಗಿತ್ತು. ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಮುಂದೆ ಹೀಗಾಗದಂತೆ ತಿಳುವಳಿಕೆ ನೀಡಿದ್ದರು. ಈಗ ಮತ್ತೆ ದೌರ್ಜನ್ಯ ಮುಂದುವರಿದಿರುವುದಕ್ಕ್ಕೆ ಮೀನುಗಾರರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ (KARWAR RURAL STATION) ದೂರು ದಾಖಲಿಸಿದ್ದಾರೆ.

ಇದನ್ನು ಓದಿ : ಗಣೇಶ ಮೆರವಣಿಗೆ ವೇಳೆ ಚಾಕು ಇರಿತ

ಮೋದಿ ಬರ್ತ್ ಡೇ ಪೂಜೆ

ಪತಿಯ ಸಂಭಂದಿಯ ಪ್ರಾಣಕ್ಕೆ ಪ್ರಾಣ ಕೊಟ್ಟ ಮಹಿಳೆ