ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಕ್ರೀಯಾಶೀಲರಾಗಿ ಕರ್ತವ್ಯ ನಿರ್ವಹಿಸಿದ ಎಸ್ಪಿ ಎಂ ನಾರಾಯಣ(SP M Narayan) ಅವರನ್ನ ವರ್ಗಾವಣೆ ಮಾಡಲಾಗಿದೆ.

ಅವರ ಸ್ಥಾನಕ್ಕೆ 2019ರ ಬ್ಯಾಚಿನ ದೀಪನ್ ಎಂ ಎನ್ ಅವರನ್ನ ಸರ್ಕಾರ ನೇಮಕಗೊಳಿಸಿದೆ. ಎಂ ನಾರಾಯಣ ಅವರು ಉತ್ತರಕನ್ನಡ ಎಸ್ಪಿ(Uttarakannada SP) ಆದಾಗಿನಿಂದ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಹದ್ದು ಮೀರಿ ವರ್ತಿಸುವ ರೌಡಿಗಳಿಗೆ ಖಡಕ್ ಆಗಿ ಉತ್ತರ ನೀಡುತ್ತಿದ್ದರು. ಪೊಲೀಸ್ ಇಲಾಖೆಗೆ(Police Department) ಹೊಸ ರೂಪ ನೀಡಿದ್ದರು.

ಅವರ ಆಸಕ್ತಿಯಂತೆಯೇ ಅವರನ್ನ ಜಿಲ್ಲೆಯಿಂದ ವರ್ಗಾವಣೆ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ(Electronic City) ಡಿಸಿಪಿಯಾಗಿ ನಿಯೋಜನೆ ಮಾಡಲಾಗಿದೆ. ನಾರಾಯಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಟ್ರಾಫಿಕ್ ಠಾಣೆ (Sirsi Traffic Station) ಆಗುವಲ್ಲಿ ಸಹಕರಿಸಿದ್ದರು.  ಜಿಲ್ಲೆಯಾದ್ಯಂತ ಅಕ್ರಮಗಳಿಗೆ ಬ್ರೇಕ್ ಬಿದ್ದಿತ್ತು.