ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ (Ankola) : ರಾಮನಗುಳಿ ಬಳಿ(Ramanaguli Near) ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ಕಾರೊಂದು(Suspect Car) ಪತ್ತೆಯಾಗಿದೆ. ಆ ಕಾರಿನಲ್ಲಿ ಒಂದು ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ.
ಕೆಎ 19 ನೋಂದಣಿ ಸಂಖ್ಯೆಯ ಕಾರು ಕಂಡುಬಂದಿದೆ. ಕಾರಿನ ರಿಜಿಸ್ಟ್ರೇಷನ್ ಪರಿಶೀಲಿಸಿದಾಗ ಆಸ್ಟ್ರೀಜ್ ಕಾರು ಎಂದು ತೋರಿಸುತ್ತಿದ್ದು ಮಡಿಕೇರಿ ಆರ್.ಟಿ.ಓನಲ್ಲಿ (Madikeri RTO) ಪಾಸಿಂಗ್ ಹೊಂದಿದೆ. ಅಸಲಿಗೆ ಇದು ಕ್ರೇಟಾ(Creta) ಕಾರಾಗಿದ್ದು, ಇದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಪತ್ತೆಯಾದ ಕಾರಿನ ಬೋನೆಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಂದ ಸ್ಥಿತಿಯಲ್ಲಿ ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಸೋಮವಾರ ಮಧ್ಯಾಹ್ನದಿಂದ ವಾರಸುದಾರರಿಲ್ಲದೇ ಕಾರು ನಿಂತಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಸ್ಥಳೀಯರು ಅಂಕೋಲಾ ಪೋಲಿಸ್ ಠಾಣೆಗೆ(Ankola Police Station) ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಉದ್ದಪ್ಪ ಧರೇಪ್ಪನವರ್, ಪಿಎಸ್ಐ ಸುನೀಲ್, ಎ.ಎಸ್.ಐ ರಿತೇಶ ನಾಗೇಕರ್, ಹವಾಲ್ದಾರ ಸಂತೋಷ ಹಾಗೂ ಸಿಬ್ಬಂದಿಗಳು ಮಾಹಿತಿ ಪಡೆದು ಪರಿಶೀಲಿಸಿ, ಪಂಚನಾಮೆ ಮಾಡಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಕಾರು ಯಾರದ್ದು, ಎಲ್ಲಿಂದ, ಯಾರು ತಂದರೂ ಎಂಬುದು ಗೊತ್ತಾಗಬೇಕಿದೆ. ಪೋಲಿಸರ ತನಿಖೆಯಿಂದ ಪತ್ತೆಯಾದ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಇದನ್ನು ಓದಿ : ನಿಜಶರಣ ಅಂಬಿಗರ ಚೌಡಯ್ಯ ವೃತ್ತಕ್ಕೆ ಎಂಎಲ್ಸಿ ಗಣಪತಿ ಉಳ್ವೆಕರ್ ಮನವಿ.
ನೃತ್ಯಕ್ಕೂ ಸೈ, ಓದಿಗೂ ಜೈ. ಸಾಧನೆಯ ಶಿಖರದ ಶಿರಾಲಿಯ ಧನಲಕ್ಷ್ಮೀ ಮೊಗೇರಗೆ ವಿಧುಷಿ ಪಟ್ಟ.