ಹೊನ್ನಾವರ : ಬಾರೀ ಮಳೆಯಿಂದಾಗಿ ದಟ್ಟ ಅರಣ್ಯದಲ್ಲಿರುವ (FOREST)ಉರಗಗಳು ಊರು ಕೇರಿ ಸೇರಿಕೊಳ್ಳುತ್ತಿವೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹೆಬ್ಬಾವೊಂದು ಅಡ್ಡಿಪಡಿಸಿದ (DISTURB)ಘಟನೆ ನಡೆದಿದೆ.

ಶನಿವಾರ ರಾತ್ರಿ  ಹೊನ್ನಾವರ (HONNAVAR) ತಾಲೂಕಿನ ಮಂಕಿಯ, ಚಿತ್ತಾರ, ಹಡಿಕಲ್ ಬೊಮ್ಮನಕೇರಿ ಮಾರ್ಗದ ರಸ್ತೆಯಲ್ಲಿ ಬಾರೀ ಗಾತ್ರದ (BIG SNAKE) ಹೆಬ್ಬಾವು ಕಾಣಿಸಿಕೊಂಡು ದಿಗಿಲು ಹುಟ್ಟಿಸಿತು.  ಹಡಿಕಲ್ ನ ರಾಜೇಶ ನಾಯ್ಕ ಎಂಬುವವರಿಗೆ ಈ ಬಾರೀ ಗಾತ್ರದ ಹಾವು ಕಾಣಿಸಿದ್ದರಿಂದ ಸಂಚರಿಸುವ ವಾಹನ (VECHICLE) ಸವಾರರನ್ನ ನಿಲ್ಲಿಸಿದರು. ಬಳಿಕ ಹಾವು ಕಾಡಿನ ದಾರಿ ಹಿಡಿದ ಮೇಲೆ ಸಂಚಾರ ಮುಂದುವರಿಸಬೇಕಾಯಿತು.

ಕಳೆದ ಕೆಲ ದಿನಗಳಿಂದ ಮಳೆ ಹೆಚ್ಚಾಗುತ್ತಾ ಇರುವುದರಿಂದ ಕಾಡಿನಲ್ಲಿರುವ ವನ್ಯ ಜೀವಿಗಳಿಗೆ ತೊಂದರೆಯಾಗಿದೆ. ನೀರಿನಲ್ಲಿ ಉರಗಗಳು  ಜನವಸತಿ ಪ್ರದೇಶಗಳಿಗೆ ಬರುತ್ತಿವೆ.