ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore): ತಮಿಳು ನಟ ಕಮಲ್ ಹಾಸನ್ (Kamal Haasan) ಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ತಮ್ಮ ಸಿನಿಮಾ ‘ಥಗ್ ಲೈಫ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್(High Court), ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ಕರ್ನಾಟಕದಲ್ಲಿ ಚಿತ್ರ ತೆರೆ ಕಾಣುವುದಿಲ್ಲ ಎಂದು ತಿಳಿಸಿದೆ.
ಚಿತ್ರ ನಟ ಕಮಲ್ ಹಾಸನ್(Kamal Haasan) ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂಬ ಹೇಳಿಕೆಯ ವಿಡಿಯೋ ವೀಕ್ಷಣೆ ಮಾಡಿದ ನ್ಯಾ. ನಾಗಪ್ರಸನ್ನ ಅವರ ಪೀಠವು, “ಈ ಹಿಂದೆ 1950ರಲ್ಲಿ ಜಿ. ರಾಜಗೋಪಾಲಚಾರಿ ಇದೇ ರೀತಿ ಹೇಳಿಕೆ ಕೊಟ್ಟಿದ್ದರು. ಆ ನಂತರ ಕ್ಷಮೆ ಕೋರಿದ್ದರು. ನೀವು ಇಲ್ಲಿಯವರೆಗೂ ಕ್ಷಮೆಯಾಚಿಸಿಲ್ಲ. ಈ ನಡುವೆ ನಿಮ್ಮ ಚಿತ್ರದ ರಿಲೀಸ್ ಬಯಸುತ್ತೀದ್ದೀರಾ?” ಎಂದು ಕಮಲ್ ಪರ ವಕೀಲರಿಗೆ ನ್ಯಾಯಾಧೀಶರು ಪ್ರಶ್ನಿಸಿದರು.
ನೀವು ವಾಣಿಜ್ಯ ಉದ್ದೇಶದಲ್ಲಿ(Commercial Purpose) ಸಿನಿಮಾ ಮಾಡಿದ್ದೀರಾ, ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕಾ ಎಂದು ಪ್ರಶ್ನಿಸಿದ ನ್ಯಾಯಾಧೀಶರು ಇದರಲ್ಲಿ ನಿಮ್ಮ ನಿಲುವು ಏನು? ತಿಳಿಸಿ ಎಂದು ಕೇಳಿದ್ದಾರೆ. “ಕಮಲ್ ಹಾಸನ್ ಆಗಿರಲಿ ಅಥವಾ ಯಾರೇ ಆಗಿರಲಿ, ಜನರ ಭಾವನೆಗೆ ನೋವುಂಟು ಮಾಡಬಾರದು. ಅವರಿಗೆ ಕ್ಷಮೆ ಕೇಳಲು ಆತ್ಮಪ್ರತಿಷ್ಠೆ ಅಡ್ಡಿಯಾಗುತ್ತಿದೆ” ಎಂದು ಹೇಳಿತು.
ಕರ್ನಾಟಕದಲ್ಲಿ ಜೂನ್ ಐದರಂದು ಕಮಲ್ ಅಭಿನಯದ “ಥಗ್ ಲೈಫ್” ಸಿನಿಮಾ ರಿಲೀಸ್ ಮಾಡಲು ತಯಾರಿ ನಡೆದಿತ್ತು ಇದೀಗ ಜೂ.10ರ ವಿಚಾರಣೆಯವರೆಗೂ ಕಾಯಬೇಕು ಎಂಬ ಖಡಕ್ ಸೂಚನೆ ನೀಡಿದ್ದರಿಂದ ಕಮಲ್ ಹಾಸನ್ ಗೆ ಶಾಕ್ ನೀಡಿದಂತಾಗಿದೆ.
ಇದನ್ನು ಓದಿ : ಸೇನಾ ಶಿಬಿರದ ಮೇಲೆ ಭೂಕುಸಿತ. ಮೂವರು ಯೋಧರ ದುರ್ಮರಣ.
	
						
							
			
			
			
			
