ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನಗರದ ರಾಷ್ಟ್ರೀಯ ಹೆದ್ದಾರಿ 66(NH 66) ಮೀನು ಮಾರುಕಟ್ಟೆಯ ಹಳೆಯ ಕಟ್ಟಡದ ಬಳಿ ಮಹಿಳೆಯೋರ್ವಳ(Women) ಮೃತದೇಹ ಕೊಲೆಯಾದ(Murder) ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅಂದಾಜು 50 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯಾಗಿದ್ದು(Unknown Women), ಆರಂಭದಲ್ಲಿ ಅಸಹಜ ಸಾವು ಎಂದು ಪರಿಗಣಿಸಲಾಗಿತ್ತು. ಕಾರವಾರ ನಗರ ಪೊಲೀಸರು ಜಿಲ್ಲಾಸ್ಪತ್ರೆಗೆ ಮೃತದೇಹ ರವಾನಿಸಿ, ವೈದ್ಯರ ಮೂಲಕ ಮರಣೋತ್ತರ(Post Martam) ಪರೀಕ್ಷೆ ನಡೆಸಿದ್ದರು. ವೈದ್ಯರು ಮೃತ ಮಹಿಳೆಯ ತುಟಿಗಳ ಮೇಲೆ ಕಚ್ಚಿದ ಕುರುಹುಗಳಿವೆ. ಅಲ್ಲದೇ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ನಗ್ನ ಸ್ಥಿತಿಯಲ್ಲಿ ಮೃತ ದೇಹದ ಸಿಕ್ಕಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಸದ್ಯ ಅತ್ಯಾಚಾರ ನಡೆದ ಬಗ್ಗೆ ಯಾವುದೇ ವೈಜ್ಞಾನಿಕ ದಾಖಲೆ ಸಿಕ್ಕಿಲ್ಲ. ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ(Karwar Town Station) ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಲಾಗಿದೆ.
ಇದನ್ನು ಓದಿ : ಉತ್ತರಕನ್ನಡದಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟಾಚಾರದ ಆರೋಪದಡಿ ಅಧಿಕಾರಿ ಮನೆ–ಕಚೇರಿ ಶೋಧ
ಕಾರವಾರದಲ್ಲಿ ಕರಾವಳಿ ಉತ್ಸವಕ್ಕೆ ವರ್ಣರಂಜಿತ ಚಾಲನೆ. ಮೊದಲ ದಿನವೇ ಜನಸಾಗರ.
