ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಶಿವರಾತ್ರಿ ಅಮವಾಸ್ಯೆಯ(Shivaratri Amavasye) ಪ್ರಯುಕ್ತ ಸಮುದ್ರ ಸ್ನಾನಕ್ಕೆ ಬಂದಿದ್ದ 17 ವರ್ಷದ ಬಾಲಕನೋರ್ವ ಸಾವನ್ನಪ್ಪಿದ ದುರ್ಘಟನೆ ತಾಲೂಕಿನ ಮಾಜಾಳಿ ಗ್ರಾಮದ(Majali Village) ರಾಮನಾಥ ಕಡಲತೀರದಲ್ಲಿ(Ramanath Beach) ಸಂಭವಿಸಿದೆ.
ಮೃತ ಬಾಲಕನನ್ನು ಗಾಂವಗೇರಿಯ ಶ್ಯಾಮ್ ಮಹಾಲೆ (17) ಎಂದು ಗುರುತಿಸಲಾಗಿದೆ. ಶಿವರಾತ್ರಿ(Shivaratri) ಹಿನ್ನಲೆಯಲ್ಲಿ ಸಮುದ್ರ ಸ್ನಾನ ಮಾಡುತ್ತಿದ್ದ ವೇಳೆ ಅವರು ಅಸ್ವಸ್ಥಗೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಕಡಲತೀರದಲ್ಲಿ(Beach) ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಸಮುದ್ರ ಸ್ನಾನ(Sea Bath) ಮಾಡುತ್ತಿದ್ದ ಭಕ್ತರನ್ನು ಮೇಲಕ್ಕೆ ಕಳುಹಿಸುವ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಸ್ನಾನಕ್ಕಿಳಿದ ಇನ್ನೊಬ್ಬ ವ್ಯಕ್ತಿ ಮೂರ್ಚೆ ಬಿದ್ದು ಬಳಿಕ ಚೇತರಿಸಿಕೊಂಡಿದ್ದಾನೆ.
ಕಾರವಾರ ತಾಲೂಕಿನ ಚಿತ್ತಾಕುಲ ಠಾಣಾ(Chittakul Station) ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವರಾತ್ರಿ ಹಿನ್ನಲೆಯಲ್ಲಿ ಸಮುದ್ರ ಸ್ನಾನಕ್ಕೆ ಬರುವ ಭಕ್ತರನ್ನ ಘಟನೆ ಬಳಿಕ ಮೇಲಕ್ಕೆ ಕಳಿಸಿದ್ದು ಘಟನೆಯಿಂದ ಆತಂಕಗೊಳ್ಳುವಂತಾಗಿದೆ.
ಪ್ರತಿ ವರ್ಷವೂ ಶಿವರಾತ್ರಿಯ ಬಳಿಕ ಬರುವ ಅಮವಾಸ್ಯೆಯಂದು ಇಲ್ಲಿನ ಕಡಲತೀರಕ್ಕೆ ಗ್ರಾಮಗಳ ದೇವರ ಪಲ್ಲಕ್ಕಿ ಬರುತ್ತಿದ್ದು ಭಕ್ತರು ಸಹ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಸಮುದ್ರ ಸ್ನಾನ ಮಾಡಿ ಪಾವನರಾಗುತ್ತಾರೆ. ಆದರೆ ಘಟನೆಯಿಂದ ಆಘಾತಗೊಳ್ಳುವಂತಾಗಿದೆ.
ಇದನ್ನು ಓದಿ : ಮತ್ತೆ ಅಧ್ಯಕ್ಷರಾದ ಶಾಸಕ ಶಿವರಾಮ ಹೆಬ್ಬಾರ್. ಉಪಾಧ್ಯಕ್ಷರಾಗಿ ಕೃಷ್ಣ.
ಸಿಐಎಸ್ಎಫ್ ಯೋಧರಿಂದ ಕೋಸ್ಟಲ್ ಸೈಕ್ಲೋಥಾನ್ ರ‍್ಯಾಲಿ. ಮೀನುಗಾರ ಮಹಿಳೆಯರಿಂದ ತಿಲಕವಿಟ್ಟು ಸ್ವಾಗತ
