ಶಿರಸಿ(SIRSI ) : ನಗರದ ಡಾ.ಬಿ ಆರ್ ಅಂಬೇಡ್ಕರ್ (Dr B R Ambedkar Bhavan)ಭವನದಲ್ಲಿ ನವೆಂಬರ 5 ಮಂಗಳವಾರ ಮತ್ತು ನವೆಂಬರ 6 ಬುಧವಾರದಂದು ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ(Pre University College) ಚೆಸ್ ಪಂದ್ಯಾವಳಿ (Chess Compitation) ನಡೆಯಲಿದೆ.
ಈ ಸಂಬಂಧ ಮಾರಿಕಾಂಬಾ (Marikamba) ಪದವಿ ಪೂರ್ವ ಕಾಲೇಜಿನಲ್ಲಿ ಶಾಸಕ ಭೀಮಣ್ಣ ನಾಯ್ಕ ಪತ್ರಿಕಾಗೋಷ್ಟಿಯಲ್ಲಿ ವಿಷಯ ತಿಳಿಸಿದ್ದಾರೆ. ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿ ಜಿಲ್ಲೆಗೆ 10 ಸ್ಪರ್ಧೆಯಂತೆ ಒಟ್ಟು 330 ಜನ ಚೆಸ್ ಆಟಗಾರರು ಆಗಮಿಸಲಿದ್ದಾರೆ. ಇದರ ಪೂರ್ವ ತಯಾರಿಗೆ ಅಂದಾಜು ಸುಮಾರು 7 ಲಕ್ಷ ರೂ. ಖರ್ಚಾಗಬಹುದು. ಇದರಲ್ಲಿ ಅನೇಕ ಸಂಘ ಸಂಸ್ಥೆಗಳ ದೇಣಿಗೆಯು ಒಳಗೊಂಡಂತೆ ಒಂದು ವೇಳೆ ಇದಕ್ಕಿಂತಲೂ ಹೆಚ್ಚು ಹಣ ಖರ್ಚಾದರೆ ಅಂತ ಹೆಚ್ಚುವರಿ ಹಣ ನಾನು ನೀಡುತ್ತೇನೆಂದರು.
ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ದೀಪಕ ದೊಡ್ಡೂರು, ಜಗದೀಶ ಗೌಡ, ಪ್ರಾಂಶುಪಾಲ ರಾದ ಬಾಲಕೃಷ್ಣ ಭಟ್ , ನರೇಂದ್ರ ನಾಯಕ ಮುಂತಾದವರು ಉಪಸ್ಥಿತರಿದ್ದರು.
ಇದನ್ನು ಓದಿ : ನಟ ದರ್ಶನ್ ಗೆ ಜಾಮೀನು