ಕಾರವಾರ : ಮೇ 22ರಂದು ಕಾರವಾರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನ ಶೇಜವಾಡದ 220ಕೆ.ವಿ. ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣ ಕೆಲಸ ನಡೆಯಲಿದೆ. ಮತ್ತು ಕದ್ರಾ ಮತ್ತು ಕೊಡ್ಸಳ್ಳಿ ವಿದ್ಯುದಾಗರದಲ್ಲಿ ಬ್ಲಾಕ್ ಸ್ಟಾರ್ಟ್ ರಿಸ್ಟೋರೇಷನ್ ಮೊಕ್ ಡ್ರಿಲ್ ಇರೋದ್ರಿಂದ ಮೇ 22 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4-30 ಗಂಟೆಯವರೆಗೆ ಕಾರವಾರ ತಾಲೂಕಿನಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಕ.ವಿ.ಪ್ರ.ನಿ. ನಿ. 220ಕೆ. ವಿ ವಿದ್ಯುತ್ ಸ್ವೀಕರಣ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.