ಭಟ್ಕಳ(Bhatkal) : ಸಮಾಜದ ಬಗ್ಗೆ ಕಳಕಳಿ ಇದ್ದರೇ ಜನಪ್ರತಿನಿಧಿಯಾಗಬೇಕೆಂಬುದಿಲ್ಲ. ಆಸಕ್ತಿ ಮತ್ತು ಇಚ್ಚಾ ಶಕ್ತಿ ಇದ್ದರೆ ಬಡವರಿಗೆ ಏನನ್ನಾದರೂ ಸಹಾಯ ಮಾಡಬಹುದು ಎಂಬುದಕ್ಕೆ ಇಲ್ಲೊಬ್ಬರು ಉದಾಹರಣೆ ಇದ್ದಾರೆ.

ಯಂಗ್ ಒನ್ ಇಂಡಿಯಾದ(Young One India) ಸಂಸ್ಥಾಪಕರಾದ (Founder) ಮಾಸ್ತಪ್ಪ ನಾಯ್ಕ ಅವರಿಗೆ ಭಟ್ಕಳ ತಾಲೂಕಿನ ಜನತೆಯೇ ಧನ್ಯವಾದ ಸಲ್ಲಿಸುತ್ತಿದೆ. ಅವರ ಸಮಾಜ ಸೇವೆಗೆ ಹೆಬ್ಳೆ ಗ್ರಾಮದ (Heble Village) ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನ ಸಲ್ಲಿಸಲಾಗುತ್ತಿದೆ.

ಹೆಬ್ಳೆ ಗ್ರಾಮದ ಕುಕನೀರ್ ಭಾಗದಲ್ಲಿರುವ (Kukneer Area) ಅಂಗನವಾಡಿಯ (Anganawadi) ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯದ ಗುಂಡಿ (Toilet Pit) ವ್ಯವಸ್ಥೆ ಇರಲಿಲ್ಲ. ಶೌಚದ ನೀರು ಇಡೀ ಮೈದಾನದಲೆಲ್ಲ ಹರಿದು ದುರ್ವಾಸನೆ ಬರುತಿತ್ತು. ಅಸ್ವಚ್ಛತೆಯ ವಾತಾವರಣವಿದ್ದುದರಿಂದ ಮಕ್ಕಳ ಅರೋಗ್ಯದ ಮೇಲೆ ಪರಿಣಾಮ ಬಿರುವ ಆತಂಕವಿತ್ತು. ಹತ್ತಾರು ವರ್ಷಗಳಿಂದ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರು ಕೇವಲ  ಭರವಸೆ ಬಿಟ್ಟರೆ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಪಾಲಕರು(Students and Parents) ಬೇಸರ ವ್ಯಕ್ತಪಡಿಸಿದ್ದರು.

ಹೀಗಾಗಿ ಸ್ಥಳೀಯ ಯುವಕರು ಸಮಾಜ ಸೇವಕರಾದ ಮಾಸ್ತಪ್ಪ ನಾಯ್ಕ ಅವರನ್ನು ಸಂಪರ್ಕಿಸಿ ತಮ್ಮೂರಿನಲ್ಲಿರುವ ಅಂಗನವಾಡಿಯ ಸ್ಥಿತಿ ಗತಿಯ ಬಗ್ಗೆ  ಹೇಳಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾಸ್ತಪ್ಪ ನಾಯ್ಕ(Mastappa Naik) ತಾವೂ ಶೌಚಾಲಯ ನಿರ್ಮಿಸಿಕೊಡುತ್ತೇನೆಂದು ವಾಗ್ದಾನ ಮಾಡಿದರು. ಅಲ್ಲದೇ ತಕ್ಷಣವೇ  25 ಸಾವಿರ ರೂಪಾಯಿ ಹಣವನ್ನು ಸ್ಥಳೀಯರೊಬ್ಬರ ಖಾತೆಗೆ ವರ್ಗಾಯಿಸಿ   ಶೌಚಾಲಯ ಕಾಮಗಾರಿ ಮಾಡುವಂತೆ ತಿಳಿಸಿದರು.

ರಾಜಕೀಯವಾಗಿ ಯಾವುದೇ ಹುದ್ದೆ ಇಲ್ಲದಿದ್ದರೂ  ಬಡವರ ಮಕ್ಕಳು ಕಲಿಯುವ ಅಂಗನವಾಡಿಗೆ ತಾವು ದುಡಿದ ಸ್ವಂತ ಹಣವನ್ನ ಖರ್ಚು ಮಾಡಿ ಶೌಚಾಲಯದ ಗುಂಡಿ ಕೆಲಸ ಪ್ರಾರಂಭ ಮಾಡಿಸಿದ್ದಾರೆ. ಇದೀಗ ಅವರ ಸಹಾಯದಿಂದಾಗಿ ಶೌಚಾಲಯಕ್ಕೆ ವ್ಯವಸ್ಥಿತವಾಗಿ ಗುಂಡಿ ನಿರ್ಮಾಣವಾಗಿದೆ. ಬಡವರ ಬಗ್ಗೆ ಕಾಳಜಿ ಹೊಂದಿರುವ ಮಾಸ್ತಪ್ಪಣ್ಣನಿಗೆ ದೇವರು ಆಯುಷ್ಯ ಆರೋಗ್ಯ, ಐಶ್ವರ್ಯ ಕೊಟ್ಟು ಮತ್ತಷ್ಟು ಬಡವರ ಸೇವೆ ಮಾಡುವ ಅವಕಾಶ ಕಲ್ಪಿಸಲೆಂದು ಗ್ರಾಮಸ್ಥರು ದೇವರಲ್ಲಿ ಬೇಡಿಕೊಂಡಿದ್ದಾರೆ.

ಶೌಚಾಲಯ ಗುಂಡಿ ಕಾಮಗಾರಿಗೆ  ಯಂಗ್ ಇಂಡಿಯಾ ಸಂಸ್ಥಾಪಕರ ಆಪ್ತ  ಸಮಾಜ ಸೇವಕ ವಿಶ್ವ ನಾಯ್ಕ   ಚರ್ಚಿಸಿ ಹಣದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಕಾಮಗಾರಿ ಸಂದರ್ಭದಲ್ಲಿ ವೆಂಕಟೇಶ್ ನಾಯ್ಕ,  ಗಣಪತಿ ನಾಯ್ಕ,  ರಾಘು ನಾಯ್ಕ,  ನವೀನ್ ನಾಯ್ಕ,  ದಿನೇಶ್ ನಾಯ್ಕ ಸೇರಿದಂತೆ ಇನ್ನು ಅನೇಕರು ಸಾಥ್ ನೀಡಿದ್ದರು.

ಇದನ್ನು ಓದಿ : ರತನ್ ಟಾಟಾ ಮುದ್ದಿನ ಶ್ವಾನಕ್ಕೂ ಆದಾಯದಲ್ಲೂ ಪಾಲು

ಹಾಡಹಗಲೇ ಕಳ್ಳತನಕ್ಕೆ ಬಂದರು. ಕೈಗೆ ಸಿಗದೇ ಎಸ್ಕೇಪ್

ಕ್ರಿಯಾಶೀಲ ಪತ್ರಕರ್ತ ಜಗದೀಶ್ ನಿಧನ

ಮೀಟರ್ ಬಡ್ಡಿ ಕುಳಗಳ ಮೇಲೆ ಪೊಲೀಸರ ದಾಳಿ

ಕಾರವಾರ ಶಾಸಕ ಸತೀಶ್ ಸೈಲ್ ಗೆ ಬಾರೀ ಪ್ರಮಾಣದ ಶಿಕ್ಷೆ