ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಗ್ರಾಮೀಣಭಾಗದಲ್ಲಿರುವ ಆಸ್ಪತ್ರೆಗಳಲ್ಲಿ(Rural Area Hospital) ಸೂಕ್ತ ಔಷಧಿ ಇಲ್ಲ. ವೈದ್ಯರಂತೂ ಇಲ್ಲವೇ ಇಲ್ಲ. ಈ ಬಗ್ಗೆ ಚರ್ಚೆ ನಡೆದು ಅಧಿಕಾರಿಗಳ ಸುಳ್ಳು ಮಾಹಿತಿಗೆ ಕೆಂಡಮಂಡಲರಾದ ಶಾಸಕ ಸತೀಶ್ ಸೈಲ್(MLA Satish Sail) ಜಿಲ್ಲಾ ಉಸ್ತುವಾರಿ ಸಚಿವರಿಗೆ ‘ನಾವೇನು ಅಂಗೂಟಾ ಛಾಪ್’ ಅಲ್ಲ ಎಂದು ಹೇಳಿ ಹೊರ ನಡೆದ ಘಟನೆ ನಡೆದಿದೆ.

ಕಾರವಾರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ನಡೆದ  ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ(KDP Meeting) ಇಂದು ತೀವ್ರ ವಾಗ್ವಾದ ನಡೆಯಿತು.   ಉಸ್ತುವಾರಿ ಸಚಿವ ಮಂಕಾಳ ವೈದ್ಯ(Minister Mankal Vaidya) ಅವರೊಂದಿಗೆ ಮಾತಿನ ಚಕಮಕಿ ನಡೆದ ಬಳಿಕ ಈ ಬೆಳವಣಿಗೆ ಕಂಡುಬಂದಿದೆ.

ಸಭೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ(Government Hospital) ಔಷಧಿಗಳ ಕೊರತೆ ಬಗ್ಗೆ ಚರ್ಚೆ ನಡೆಯಿತು. ಅಧಿಕಾರಿಗಳು ಆಸ್ಪತ್ರೆಗಳಲ್ಲಿ ಮೆಡಿಸಿನ್ ಕೊರತೆ(Medicine Shortage) ಇಲ್ಲ ಎಂದು ಮಾಹಿತಿ ನೀಡಿದಾಗ, ಶಾಸಕ ಸೈಲ್ ಆಕ್ರೋಶ ವ್ಯಕ್ತಪಡಿಸಿದರು. “ವೈದ್ಯರೇ ಇಲ್ಲದಿದ್ದರೆ ಮೆಡಿಸಿನ್ ಯಾರು ಕೊಡುತ್ತಾರೆ?” ಎಂದು ಪ್ರಶ್ನಿಸಿದ ಅವರು, ನೆಲಮಟ್ಟದ ಸಮಸ್ಯೆಗಳನ್ನು ಅಧಿಕಾರಿಗಳು ಸರಿಯಾಗಿ ವರದಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ, “ವೈದ್ಯರ ಕೊರತೆ ಇದ್ದರೆ ನೀವು ತರಬೇಕು” ಎಂದು ಹೇಳಿದಾಗ ಸಚಿವರ ಈ ಮಾತಿಗೆ ಸಿಟ್ಟಿಗೆದ್ದ ಸೈಲ್, “ಹೇಳಿದ್ದನ್ನೆಲ್ಲಾ ಕೇಳಿಕೊಂಡು ಹೋಗಲು ನಾವೇನು ಅಂಗೂಟಾ ಛಾಪ್ ಅಲ್ಲ(ಹೆಬ್ಬೆಟ್ ಅಲ್ಲ). ಜನರು ಸಮಸ್ಯೆಗಳ ಬಗ್ಗೆ ನಮ್ಮನ್ನು ಕೇಳ್ತಾರೆ,” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು.

ತಾಲ್ಲೂಕು ಮಟ್ಟದ ವಿಚಾರಗಳನ್ನು ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ(KDP Meeting) ಚರ್ಚೆ ಮಾಡಬಾರದು ಎಂದರೆ ತಾನು ಕುಳಿತುಕೊಳ್ಳುವುದಿಲ್ಲ ಎಂದು ಸೈಲ್ ಸ್ಪಷ್ಟಪಡಿಸಿದರು. “ಜನರ ಸಮಸ್ಯೆಗಳಿಗೆ ಉತ್ತರ ಕೊಡಲು ಬಂದಿದ್ದೇನೆ. ಈ ರೀತಿ ಸಭೆ ನಡೆಸುವುದಾದರೆ ನಾನು ಭಾಗವಹಿಸುವುದಿಲ್ಲ,” ಎಂದು ಹೇಳಿ ಸಭೆಯಿಂದ ಎದ್ದು ಹೊರ ನಡೆದರು. ಈ ಸಂದರ್ಭದಲ್ಲಿ   ಕೆಲಕಾಲ ಗೊಂದಲ ಸೃಷ್ಟಿಯಾಯಿತು.  ನಂತರ ಸಭೆ ಮುಂದುವರಿದಿದೆ.

ಇದನ್ನು ಓದಿ : ನಸುಕಿನ ಜಾವ ನುಗ್ಗಿದ ಕಾಡಾನೆ. ದನದ ಕೊಟ್ಟಿಗೆ ದ್ವಂಸ.

ಸಂಶುದ್ದೀನ್ ವೃತ್ತ ತೆರವು. ಮುಂದೆ ಹೆಸರು ಬದಲಾವಣೆಯ ಕುತೂಹಲ.

ಮ್ಯಾರಥಾನ್ ಲ್ಲಿ ಭಾಗವಹಿಸಿದ್ದ ಸಬ್ ಇನ್ಸಪೆಕ್ಟರ್ ಕುಸಿದು ಬಿದ್ದು ಸಾವು.