ಭಟ್ಕಳ(Bhatkal) :   ಪ್ರಚೋದನಕಾರಿ ಭಾಷಣದ ಮೂಲಕ ಪ್ರತಿಭಟನೆ ನಡೆಸಿ ಸಮಾಜದಲ್ಲಿ ಅಶಾಂತಿ ಹರಡಿಸುವ ಎಸ್.ಡಿ.ಪಿ.ಐ(SDPI) ಮುಖಂಡರ ಮೇಲೆ ಕ್ರಮ ಜರುಗಿಸುವಂತೆ ಆಗಹ್ರಿಸಿ  ಭಟ್ಕಳ ಬಿಜೆಪಿ(Bhatkal BJP) ಘಟಕ ದೂರು(Complaint) ದಾಖಲಿಸಿದೆ.

ಸಿಪಿಐ ಗೋಪಿಕೃಷ್ಣ ಅವರಿಗೆ ದೂರು ನೀಡುವ ಮೂಲಕ ಎಸ್.ಡಿ.ಪಿ.ಐ(SDPI) ಸಂಘಟನೆಯ ಮುಖಂಡರು ಕಳೆದ ನವೆಂಬರ 06 ರಂದು ಪಟ್ಟಣದ ತಾಲ್ಲೂಕು ಪಂಚಾಯತ್(Taluku Panchayat) ಎದುರು ಪ್ರತಿಭಟನೆ ನಡೆಸಿ ಸಂಘ ಪರಿವಾರ, ವೀರ ಸಾವರ್ಕರ(Veersavarkar) ಹಾಗೂ ದೇಶಭಕ್ತ ಸಂಘಟನೆ ಹಾಗೂ ವ್ಯಕ್ತಿಗಳ ವಿರುದ್ದ ಪ್ರಚೋದನಕಾರಿ ಮಾತುಗಳನ್ನಾಡಿದ್ದರು.  ಎಸ್.ಡಿ.ಫಿ.ಐ. ಸಂಘಟನೆಯ ತೌಫಿಕ್ ಬ್ಯಾರಿ, ವಾಸಿಂ ಮಣಿಗಾರ ಇವರ ಜೊತೆ ಇನ್ನು ಸುಮಾರು 50 ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹಾಗೂ ಪ್ರಚೋದನಾಕಾರಿಯಾಗಿ ಭಾಷಣ ಮಾಡಿ ಮತ್ತು ಘೋಷಣೆಗಳನ್ನು ಕೂಗಿದ್ದಾರೆ‌.

ಪ್ರಚೋದನಾಕಾರಿಯಾಗಿ ಕೋಮು ದ್ವೇಷ ಹರಡಿಸುವ ರೀತಿಯಲ್ಲಿ ಭಾಷಣ ಮಾಡುವ ಮತ್ತು ಘೋಷಣೆ ಕೂಗುವ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಹರಡಿಸುವ ಕೃತ್ಯ ಮಾಡಿದ್ದು, ಈ ಬಗ್ಗೆ ಈ ಎಲ್ಲ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂಘಟನೆಯ ಮುಖಂಡರು ಈ ನಿಷೇದಿತ ಪಿ.ಎಫ್.ಐ.(PFI) ಸಂಘಟನೆಯ ಕಾರ್ಯಕರ್ತರೂ ಆಗಿದ್ದರು ಎನ್ನುವ ಗುಮಾನಿ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ‌ ಕೋಮು ದ್ವೇಷ ಹರಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡುವ ಇಂತಹ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಭಟ್ಕಳ ಬಿಜೆಪಿ ಮಂಡಳದ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ ಹೆಸರಿನಲ್ಲಿ ದೂರು ಸಲ್ಲಿಸಲಾಯಿತು.

ಬಿಜೆಪಿ ತಾಲ್ಲೂಕು ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಸೇರಿದಂತೆ ಬಿಜೆಪಿ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಹಿಂದೂ ಮುಖಂಡರು ಮತ್ತು ಹಿಂದೂ ಕಾರ್ಯಕರ್ತರು ಹಾಜರಿದ್ದರು.

ಇದನ್ನು ಓದಿ : ಭಟ್ಕಳ ಪೊಲೀಸರಿಂದ ಗೋಮಾಂಸ ವಶಕ್ಕೆ

ಶಿರಸಿ, ಸಿದ್ದಾಪುರ ಭಾಗದಲ್ಲಿ ಕಾಡಾನೆ ದಾಳಿ

ಪೊಲೀಸ್ ಸಮವಸ್ತ್ರದಲ್ಲಿ ವಿಡಿಯೋ ಕಾಲ್. ವಂಚನೆ

ಜಲಪಾತದಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

ಮನೆಯಲ್ಲಿದ್ದ ಮಹಿಳೆ ಸಾವು. ಪ್ರಕರಣ

ಅದೃಷ್ಟದ ಕಾರು ಮಾರಲಿಲ್ಲ. ಸಮಾಧಿ ಮಾಡಿದ