ಮಂಗಳೂರು(Mangalore) : ದಕ್ಷಿಣ ಕನ್ನಡ ಉಸ್ತುವಾರಿಯಾದ(SouthCanara Incharge) ಉಪೇಂದ್ರ ಪೈ ಶಿರಸಿ ಅವರು ಮಂಗಳೂರಿನ ಜೆಡಿಎಸ್ ಜಿಲ್ಲಾ(JDS District) ಕಾರ್ಯಾಲಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜೆಡಿಎಸ್ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ(Membarship Abhiyana)  ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ ಪೈ,  ಪಕ್ಷ ಸಂಘಟನೆ ಮಾಡುವ ಮುಖಾಂತರ ದಕ್ಷಿಣ ಕನ್ನಡದ ಪ್ರತಿಯೊಂದು ಮನೆ ಮನೆಗೆ ಹೋಗಿ ಜೆಡಿಎಸ್ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು.   ಅದೇರೀತಿ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಇಡೀ ರಾಜ್ಯದಲ್ಲಿ ನಮ್ಮ ಪಕ್ಷ ಬಲಪಡಿಸಿ ಅಧಿಕಾರಕ್ಕೆ ಬರಬೇಕು, ಹಾಗಾಗಿ ಎಲ್ಲಾ ಪ್ರಮುಖರು ಹಾಗು ಕಾರ್ಯಕರ್ತರು ಶ್ರಮ ಪಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಮುಖಂಡರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರು 2023 ರ ಅಭ್ಯರ್ಥಿಗಳು ಮತ್ತು  ತಾಲೂಕು ಅಧ್ಯಕ್ಷರು ಹಾಗು ಅನೇಕ ಜೆಡಿಎಸ್ ಪಕ್ಷದ ಹಿರಿಯರು ಉಪಸ್ಥಿತರಿದ್ದರು.

ಇದನ್ನು ಓದಿ :

ಖಜಾನೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

ಬಾಲಕಿ ಹೃದಯಘಾತದಿಂದ ಸಾವು