ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ಕೊಂಕಣ ರೈಲ್ವೆ(Konkan Railway) ಮಾರ್ಗದಲ್ಲಿ ವೆಚ್ಚ-ಪರಿಣಾಮಕಾರಿ, ವಿಶ್ವಾಸಾರ್ಹ ಮತ್ತು ಪರಿಸರ ಸ್ನೇಹಿ ವಿದ್ಯುತ್ ಟ್ರಾಕ್ಷನ್ನತ್ತ ಕಾರ್ಯತಂತ್ರದ ಹೆಜ್ಜೆ ಇಡಲಾಗಿದೆ.
ಬುಧವಾರ ಕೊಂಕಣ ರೈಲ್ವೇಯು ಕಾರವಾರದಲ್ಲಿ ನೂತನ ಟ್ರಾಕ್ಷನ್ ಸಬ್ಸ್ಟೇಷನ್ (TSS) ಅನ್ನು ಯಶಸ್ವಿಯಾಗಿ ಕಾರ್ಯಾರಂಭ ಮಾಡಿದೆ. ಕೊಂಕಣ ರೈಲ್ವೆ ನಿಗಮ ನಿಯಮಿತದ (KRCL) ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು (CMD) ಸಂತೋಷಕುಮಾರ್ ಝಾ ಉದ್ಘಾಟಿಸಿದರು.
ಈ ಮಹತ್ವದ ಯೋಜನೆಯು ಕೊಂಕಣ ರೈಲ್ವೆಗೆ ವಾರ್ಷಿಕ ₹2 ಕೋಟಿಗೂ ಅಧಿಕ ಇಂಧನ ಉಳಿತಾಯ ಮಾಡುವ ಗುರಿಯನ್ನು ಹೊಂದಿದೆ. ಈ ಹೊಸ ಸಬ್ಸ್ಟೇಷನ್ ಕಾರ್ಯಾರಂಭದೊಂದಿಗೆ, ಬಾಳ್ಳಿ ಟಿಎಸ್ಎಸ್ನಿಂದ ಬರುತ್ತಿದ್ದ ಒಟ್ಟು ಟ್ರಾಕ್ಷನ್ ಲೋಡ್ನ 40-50% ಈಗ ಓಪನ್ ಆಕ್ಸೆಸ್ ಬಿಲ್ಲಿಂಗ್ ವ್ಯವಸ್ಥೆಗೆ ವರ್ಗಾಯಿಸಲ್ಪಡುತ್ತದೆ. ಕದ್ರಾದಿಂದ ಬರುವ ಮೀಸಲಾದ 110kV ವಿದ್ಯುತ್ ಪೂರೈಕೆ ಮತ್ತು ಸ್ಮಾರ್ಟ್ ಲೋಡ್ ಆಪ್ಟಿಮೈಸೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು ಕಾರವಾರ ಟಿಎಸ್ಎಸ್ ಕಾರ್ಯನಿರ್ವಹಿಸಲಿದೆ.
ಕಾರವಾರ ಟಿಎಸ್ಎಸ್ನ ಪ್ರಮುಖ ಪ್ರಯೋಜನಗಳೆಂದರೆ ಕಡಿಮೆ ವಿದ್ಯುತ್ ಬಿಲ್ಗಳು: ಓಪನ್ ಆಕ್ಸೆಸ್ ಬಿಲ್ಲಿಂಗ್ ಮೂಲಕ ವೆಚ್ಚ ಕಡಿತ., ಸುಧಾರಿತ ವೋಲ್ಟೇಜ್ ಸ್ಥಿರತೆ: ಉತ್ತಮ ಮತ್ತು ಪರಿಣಾಮಕಾರಿ ವಿದ್ಯುತ್ ಪೂರೈಕೆ.
ನಿರಂತರ ರೈಲು ಕಾರ್ಯಾಚರಣೆ: ವಿದ್ಯುತ್ ಕಡಿತದ ಸಮಯದಲ್ಲಿಯೂ ರೈಲು ಸಂಚಾರಕ್ಕೆ ಯಾವುದೇ ಅಡಚಣೆಯಾಗುವುದಿಲ್ಲ. ಹೆಚ್ಚಿದ ಮಾರ್ಗ ಸಾಮರ್ಥ್ಯ: ಹೆಚ್ಚು ರೈಲುಗಳನ್ನು ಓಡಿಸಲು ಸಾಧ್ಯವಾಗುತ್ತದೆ.
ಈ ಸುಧಾರಿತ ಟ್ರಾಕ್ಷನ್ ವಿದ್ಯುತ್ ವಿಶ್ವಾಸಾರ್ಹತೆಯು ಕೊಂಕಣ ಮಾರ್ಗದಲ್ಲಿ ಹೆಚ್ಚಿನ ಸರಕು ಮತ್ತು ಪ್ರಯಾಣಿಕರ ರೈಲುಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ. ಇದು ಕೊಂಕಣ ರೈಲ್ವೆಗೆ ಹೆಚ್ಚಿನ ಆದಾಯವನ್ನು ತರಲು ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ಆರ್ ಆರ್ ಎಂ ಆಶಾ ಶೆಟ್ಟಿ, ಹಿರಿಯ ಪ್ರಾದೇಶಿಕ ಎಲೆಕ್ಟ್ರಿಕಲ್ ಎಂಜಿನೀಯರ್ ವಿನಾಯಕ ನಾಯ್ಕ, ಬಾಬು ಕಡ್ಲೆ ಹಾಜರಿದ್ದರು.
ಇದನ್ನು ಓದಿ : ಭಟ್ಕಳ ಸಮೀಪದ ಕಡಲಲ್ಲಿ ಸಾಂಪ್ರದಾಯಿಕ ದೋಣಿ ಪಲ್ಟಿ. ನಾಲ್ವರು ಕಣ್ಮರೆ.
ಏಳುಬೆಟ್ಟ ಒಡೆಯನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಗಣಪತಿ ನಾಯ್ಕ.