ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) :  ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ಸಂಘಟನೆ ಆಶ್ರಯದಲ್ಲಿ  ಕಾರವಾರ(Karwar) ನಗರದಲ್ಲಿ ಮೊದಲ ಬಾರಿಗೆ ಮೊಸರು ಗಡಿಗೆ(Curdpot) ಒಡೆಯುವ ಸ್ಪರ್ದೆ ಸಂಭೃಮದಿಂದ(Celebration) ನಡೆಯಿತು

ನಗರದ  ರಾಧಾಕೃಷ್ಣ ದೇವಾಲಯ(Radhakrishna Temple) ಎದುರು ಶ್ರೀ ಕೃಷ್ಣ ಜನ್ಮಾಷ್ಠಮಿ (Krishnashtami) ಪ್ರಯುಕ್ತ  ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಯುವಕರು,ಭಕ್ತರು ಈ  ಸ್ಪರ್ದಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭೃಮಪಟ್ಟರು.

ಕಾರವಾರದ ಐದು ತಂಡಗಳ ನೂರಾರು ಯುವಕರು ಸ್ಪರ್ಧೆಯಲ್ಲಿ  ಭಾಗವಹಿಸಿದ್ದರು. ಸ್ಪರ್ದಾ ತಂಡಗಳು ನಾ ಮುಂದು ತಾಮುಂದು ಎಂದು  ಒಬ್ಬರ ಮೇಲೊಬ್ಬರು ಏರಿ ಗಡಿಗೆ ಒಡೆಯಲು ಸಾಹಸ ಪ್ರದರ್ಶಿಸಿರುವುದು ರೋಮಾಂಚನಕಾರಿಯಾಗಿತ್ತು. ಸ್ಪರ್ದೆಯಲ್ಲಿ ಬೈತಖೋಲ್ ನ ಶ್ರೀ ಭೂದೇವಿ(Bhudevi) ತಂಡ ಪ್ರಥಮ ಸ್ಥಾನಗಳಿಸಿದರೆ, ಕಾರವಾರದ ಕೋಡಿಬೀರ(Kodibeera) ತಂಡ ದ್ವೀತಿಯ ಸ್ಥಾನ ಗಳಿಸಿತು.

ಈ ಹಿಂದೆ ಇಂಥ ಕಾರ್ಯಕ್ರಮಗಳು ಬೇರೆ ರಾಜ್ಯ, ಬೇರೆ ಜಿಲ್ಲೆಗಳಲ್ಲಿ ಆಯೋಜಿಸಲಾಗುತಿತ್ತು. ಕಾರವಾರದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವುದು ಭಕ್ತರ ಸಂಭೃಮಕ್ಕೆ ಕಾರಣವಾಯಿತು.  ಇಂಥ ಕಾರ್ಯಕ್ರಮ ಪ್ರತಿ ವರ್ಷವೂ ನಡೆಯಲಿ ಎಂದು ಭಾಗವಹಿಸಿದ ಸ್ಪರ್ದಾಳುಗಳು ತಮ್ಮ  ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ  ಮಾಜಿ‌ ಶಾಸಕಿ ರೂಪಾಲಿ ನಾಯ್ಕ, ಪದ್ಮಪುಷ್ಪ ಗುರುಕುಲದ ಶಿವಮೂರ್ತಿ ಜೋಯಿಸ್ ಅವರು ಭಾಗವಹಿಸಿದ್ದರು. ವಿಶ್ವ ಹಿಂದು ಪರಿಷತ್(Vishwa Hindu Parishat) ಹಾಗೂ ಭಜರಂಗದಳದ(Bhajarangadala) ಪ್ರಮುಖರು, ಕಾರ್ಯಕರ್ತರು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದರು.

ಇದನ್ನು ಓದಿ : ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಸು.ಪ್ರಮ್.ಸೋ  ಚಿತ್ರ.

ಯಲ್ಲಾಪುರದಲ್ಲಿ ಭೀಕರ ಅಪಘಾತ. ಮೂವರು ಸ್ಥಳದಲ್ಲಿ ಸಾವು. ಏಳು ಗಂಭೀರ