ಭಟ್ಕಳ(BHATKAL): ಕಳೆದ ಹಲವು ದಿನಗಳಿಂದ ಭಟ್ಕಳ ತಾಲೂಕಿನ ಕರಿಕಲ್ ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಸೀಮೋಲ್ಲಂಘನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಬೆಳಿಗ್ಗೆ ಕರಿಕಲ್ ಧ್ಯಾನ ಮಂದಿರದಿಂದ ಶ್ರೀಗಳನ್ನು ಬೈಕ್ ಹಾಗೂ ಕಾರಿನ ಮೂಲಕ ಶೃಂಗಾರಗೊಂಡ ವಾಹನದಲ್ಲಿ ಕೂರಿಸಿ ಭವ್ಯ ಮೆರವಣಿಗೆಯಲ್ಲಿ ಶಿರಾಲಿ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನಕ್ಕೆ(HALEKOTE HANUMANTHA TEMPLE) ಕರೆದೊಯ್ದರು. ಪೂರ್ಣ ಕುಂಭದೊಂದಿಗೆ ಸ್ವಾಗತ ಮಾಡಲಾಯಿತು.

ಸಾರದಹೊಳೆಯ ತೀರದಲ್ಲಿ ಶ್ರೀಗಳು ಗಂಗಾಪೂಜೆಯ ಜೊತೆಗೆ ಗಂಗಾರತಿ (GANGAPOOJA, GANGARATI)ಪೂಜೆಯನ್ನು ನೆರೆವೇರಿಸಿದರು. ನಂತರ
ಶ್ರೀ ಹನುಮಂತ ದೇವರಿಗೆ ಶ್ರೀಗಳ ಸಮ್ಮುಖದಲ್ಲಿ ಪೂಜೆ ಮಾಡಲಾಯಿತು. ಈ ವೇಳೆ ಸಾರದಹೋಳೆ ಹಳೆ ಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯಿಂದ ಶ್ರೀಗಳನ್ನು ಗೌರವಿಸಲಾಯಿತು.

ಸಿಮೋಲ್ಲಂಘನ ಕಾರ್ಯಕ್ರಮ ಮತ್ತು ಹನುಮಂತ ದೇವರ ಪೂಜಾ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ(MANKAL VAIDYA), ಬೆಳ್ತಂಗಡಿ ಶಾಸಕ ಹರೀಶ ಪೂಂಜಾ(HARISH POONJA), ಮಾಜಿ ಶಾಸಕ ಸುನೀಲ ನಾಯ್ಕ(SUNIL NAIK), ಮಾಲಕಯ್ಯ ಗುತ್ತೇದಾರ(MALAKAYYA GUTTEDAR), ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಭಟ್ಕಳ ಕೂಟದ ಅಧ್ಯಕ್ಷ ಕೃಷ್ಣಾ ನಾಯ್ಕ, ಸಾರದಹೊಳೆ ಕೂಟದ ಆರ್ ಕೆ ನಾಯ್ಕ, ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನ ಅಧ್ಯಕ್ಷರು ಹಾಗೂ ನಾಮಧಾರಿ ಸಮಾಜದ ಹಿರಿಯ ಕಿರಿಯ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದರು. ಬಳಿಕ ಧರ್ಮಸಭೆ (DHARMASABHE) ನಡೆಯಿತು.

ಇದನ್ನು ಓದಿ : ಅಳಿವೆಗೆ ಸಿಲುಕಿದ ಯಾಂತ್ರಿಕ ದೋಣಿ

ಜೈಲಿನಲ್ಲಿ ಖೈದಿಗಳ ರಂಪಾಟ