ಗೋಕರ್ಣ(Gokarn) :  ಇಲ್ಲಿನ ಕುಡ್ಲೇ (Kudle) ಸಮುದ್ರದಲ್ಲಿ ಮಸ್ತಿ ಮಾಡಲು ಇಳಿದ ವಿದೇಶಿ ಪ್ರವಾಸಿಗನೋರ್ವ ಲೈಫ್ ಗಾರ್ಡ್(Life Guard) ಸಿಬ್ಬಂದಿಗಳ ಸಾಹಸದಿಂದ ಬಚಾವ್ ಆದ ಘಟನೆ ಬುಧವಾರ ಇಳಿ ಹೊತ್ತಿನಲ್ಲಿ ನಡೆದಿದೆ.

ಇಟಲಿ (Itali)ದೇಶದ 83 ವರ್ಷದ ಜಾರ್ಜ್ ರಕ್ಷಣೆಗೊಳಗದವರು. ಸೂರ್ಯಸ್ತದ ಬಳಿಕ ಇಲ್ಲಿನ ಸಮುದ್ರದಲ್ಲಿ ಈಜಾಡಲು ಇಳಿದಿದ್ದ. ನೀರಿನ ಸುಳಿಗೆ ಸಿಕ್ಕಿ  ಕೂಗಾಡಲು ಶುರು ಮಾಡಿದ್ದ ಎನ್ನಲಾಗಿದೆ. ಸಹಾಯಕ್ಕಾಗಿ ಕರೆದಾಗ   ಕರ್ತವ್ಯ ನಿರತರಾಗಿದ್ದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ನಾಗೇಂದ್ರ ಕೂರ್ಲೆ,   ಪ್ರದೀಪ್ ಅಂಬಿಗ,   ಪ್ರವಾಸಿ ಮಿತ್ರ ಶೇಖರ ಹರಿಕಂತ್ರ,  ಮೈಸ್ಟಿಕ ಬೋಟಿಗ್ ಗ್ರುಪಿನ ಜೆಸ್ಕಿ ಹಾಗೂ ಬೋಟ್ ಮೂಲಕ  ಕಾರ್ಯಾಚರಣೆ ಮಾಡಿ ರಕ್ಷಿಸಲಾಗಿದೆ.

ಕಡಲತೀರದಲ್ಲಿ ಸಂಜೆ ಆರು ಗಂಟೆ ಬಳಿಕ ಸಮುದ್ರಕ್ಕೆ ಇಳಿಯುವಂತಿಲ್ಲ. ಆದರೂ ಲೈಫ್ ಗಾರ್ಡ್ ಸಿಬ್ಬಂದಿಗಳ ಸೂಚನೆ ಧಿಕ್ಕರಿಸಿ ಪ್ರವಾಸಿಗರು ಮಸ್ತಿ ಮಾಡುತ್ತಿದ್ದಾರೆ. ಇಲಾಖೆಯಿಂದ ತುರ್ತು ಸೂಚನಾ ಫಲಕವನ್ನಾದರೂ ಹಾಕುವ ವ್ಯವಸ್ಥೆಯಾಗಬೇಕು. ಜೊತೆಗೆ ಉಲ್ಲಂಘಿಸಿದವರಿಗೆ ದಂಡ ವಿಧಿಸಬೇಕು ಎಂದು ಸ್ಥಳೀಯರು ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಕುಡ್ಲೆ ಬೀಚ್ ನಲ್ಲಿ ಪ್ರವಾಸಿಗರ ರಕ್ಷಣೆಯನ್ನ ಲೈಫ್ ಗಾರ್ಡ್ ಗಳು ಮಾಡುತ್ತಿದ್ದುದರಿಂದ ಜೀವ ಉಳಿಯುತ್ತಿದೆ.

ಇದನ್ನು ಓದಿ : ಕಾರವಾರದಲ್ಲಿ ಇಂದಿನಿಂದ ಅದ್ದೂರಿಯ ಕಡಲ ಉತ್ಸವ. 21, 22 ರಂದು ಅದ್ಭುತ ಕಾರ್ಯಕ್ರಮ.

ಬಿಣಗಾದ ಇಂಡಸ್ಟ್ರಿಯಲ್ಲಿ ಕಾರ್ಮಿಕ ಸಂಶಯಾಸ್ಪದ ಸಾವು.