ಕಾರವಾರ(Karwar): ತಾಲ್ಲೂಕಿನ ಬಿಣಗಾದ ಗ್ರಾಸಿಮ್ ಇಂಡಸ್ಟ್ರಿಯಲ್ಲಿ (Binaga Grasim Industri) ಕಾರ್ಮಿಕನೊಬ್ಬ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾನೆ(Suspect Death).

ಬಾಯರ್‌ನಲ್ಲಿ ಅನಿಲ ಸೋರಿಕೆಯಾದ ಪರಿಣಾಮವಾಗಿ ಕಾರ್ಮಿಕ ಸಾವನ್ನಪ್ಪಿದ್ದಾನೆಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಬೈತಖೋಲ ಮೂಲದ ನಾಗರಾಜ ವಿಷ್ಣು ಅವರ್ಸೇಕರ್(41) ಮೃತ ದುರ್ದೈವಿಯಾಗಿದ್ದಾನೆ.

ಬಿಣಗಾದ ಸೋಲಾರಿಸ್ ಕೆಮಿಟೆಕ್(Binaga Solaris ಕೆಮಟೆಕ್) ಕಂಪೆನಿಯಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ರಾತ್ರಿ 11:30ರ ಸುಮಾರಿಗೆ ಬಾಯರ್‌ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿದ್ದು, ಕಾರ್ಮಿಕ ನಾಗರಾಜ ಸಾವನ್ನಪ್ಪಿರಬಹುದೆಂದು ಹೇಳಲಾಗುತ್ತಿದೆ. ಉಳಿದ ಕಾರ್ಮಿಕರು ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕಾರವಾರ ಗ್ರಾಮೀಣ ಠಾಣೆಯ (Karwar Rural Station) ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸಂಬಂಧ ಮೃತ ಕಾರ್ಮಿಕನ ಕುಟುಂಬದವರಿಂದ ದೂರು ಪಡೆದುಕೊಂಡಿದ್ದಾರೆ.

ಕಾರ್ಖಾನೆ ಬಗ್ಗೆ ಬೇಜವಾಬ್ದಾರಿ : ಕಾರವಾರ ನಗರದ ಬಿಣಗಾದಲ್ಲಿ ಹಲವು ವರ್ಷಗಳಿಂದ ಕಾರ್ಖಾನೆ ಇದ್ದು, ವರ್ಷ ಕಳೆದಂತೆ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಕಡಿಮೆ ಕಾರ್ಮಿಕರನ್ನ ಬಳಸಿಕೊಂಡು ಇಂಡಸ್ಟ್ರಿ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆ ಇಲ್ಲಿನ ವ್ಯವಸ್ಥೆಗಳು, ಸುರಕ್ಷತೆಯ ಬಗ್ಗೆ ಸಮರ್ಪಕವಾಗಿ ಲಕ್ಷ್ಯ ಹಾಕುತ್ತಿಲ್ಲ ಎಂಬ ದೂರಿದೆ. ಇನ್ನಾದರೂ ಸಂಬಂಧಪಟ್ಟವರು ಗಮನ ಹರಿಸಿ ಮುಂದಾಗುವ ಅನಾಹುತ ತಪ್ಪಿಸಬೇಕಾಗಿದೆ.
ಇದನ್ನು ಓದಿ : ಕುಡ್ಲೆ ಕಡಲತೀರದಲ್ಲಿ ಎರಡು ರಷ್ಯಾ ಪ್ರಜೆಗಳ ಜೀವ ರಕ್ಷಣೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಪದ್ಮಶ್ರೀ ತುಳಸಿ ಗೌಡ ಅವರ ಅಂತ್ಯ ಕ್ರೀಯೆ.

ಬಾರದ ಲೋಕಕ್ಕೆ ಪಯಣಿಸಿದ  ನಾಡಿನ ಸಸ್ಯವಿಜ್ಞಾನಿ,  ಪದ್ಮಶ್ರೀ ತುಳಸಿ ಗೌಡ