ಭಟ್ಕಳ(BHATKAL) :  ಪ್ರವಾಸಕ್ಕೆ  ಬಂದಿದ್ದ ವಿದ್ಯಾರ್ಥಿಯೋರ್ವ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ  ಘಟನೆ  ಭಟ್ಕಳ ಪಟ್ಟಣದಲ್ಲಿ(BHATKAL Town)  ನಡೆದಿದೆ.

ಕೊಪ್ಪಳ(Koppal) ಜಿಲ್ಲೆಯ ಯಲಬುರ್ಗ(Yalaburga) ತಾಲೂಕಿನ ಗಾಣದಾಳದ (Ganadala)ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ (೧೪) ಮೃತ ದುರ್ದೈವಿ.

ರಾ ಹೆದ್ದಾರಿ 66, ಭಟ್ಕಳದ ತಾಲೂಕು ಪಂಚಾಯತ ಎದುರಿನ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆಗೆಂದು ಕತ್ತಲಲ್ಲಿ ಹೋದಾಗ ತೆರೆದ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಗಾಣದಾಳ ಶಾಲೆಯ ಒಟ್ಟು ಸುಮಾರು ನೂರು ವಿದ್ಯಾರ್ಥಿಗಳು ಎರಡು ಬಸ್ ಗಳಲ್ಲಿ ಜೋಗ ಫಾಲ್ಸ್(Jogfalls),  ಕೊಲ್ಲೂರು(Kolluru) ಮತ್ತಿತರ ಕಡೆ ಪ್ರವಾಸಕ್ಕೆಂದು  ಬಂದಿದ್ದರು.  13 ಜನ ಶಿಕ್ಷಕರು ಜೊತೆಗಿದ್ದರು. ನಿನ್ನೆ ಗಾಣದಾಳದಿಂದ ಹೊರಟಿದ್ದ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಜೋಗ ಜಲಪಾತ ವೀಕ್ಷಿಸಿದ್ದರು. ಬಳಿಕ ಅಲ್ಲಿಂದ ಕೊಲ್ಲೂರಿಗೆ ತೆರಳಲು  ಹೊನ್ನಾವರ (Honnavar) ಮಾರ್ಗವಾಗಿ ಬಂದಿದ್ದರು. ಮಾರ್ಗ ಮಧ್ಯ ಭಟ್ಕಳದಲ್ಲಿ ಮಾತ್ರೆ ಖರೀದಿಗಾಗಿ ಬಸ್ ನಿಲ್ಲಿಸಲಾಗಿತ್ತು. ಅದೇ ವೇಳೆ ಮೂತ್ರ ವಿಸರ್ಜನೆಗೆಂದು ಮಕ್ಕಳು ಬಸ್ ನಿಂದ ಇಳಿದಿದ್ದಾರೆ. ಕತ್ತಲಾಗಿದ್ದರಿಂದ ತಡೆಗೋಡೆ ಇಲ್ಲದ ತೆರೆದ ಬಾವಿಗೆ ಬಾಲಕ ಬಿದ್ದಿದ್ದಾನೆ.  ಜೊತೆಗಿದ್ದ ಬಾಲಕರು ಕೂಗಿದ್ದರಿಂದ ಸ್ಥಳೀಯರು ದೌಡಾಯಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಅಸ್ವಸ್ಥಗೊಂಡ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಸೂರ್ಯಸ್ತದ ನಂತರ ವಿದೇಶಿಗನ ಮಸ್ತಿ.   ರಕ್ಷಣೆಗಾಗಿ  ಲೈಫ್ ಗಾರ್ಡ್ಸ್ ಸುಸ್ತು.

ಕಾರವಾರದಲ್ಲಿ ಇಂದಿನಿಂದ ಅದ್ದೂರಿಯ ಕಡಲ ಉತ್ಸವ. 21, 22 ರಂದು ಅದ್ಭುತ ಕಾರ್ಯಕ್ರಮ.

ಬಿಣಗಾದ ಇಂಡಸ್ಟ್ರಿಯಲ್ಲಿ ಕಾರ್ಮಿಕ ಸಂಶಯಾಸ್ಪದ ಸಾವು.