ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ಕುಮಟಾ ಪುರಸಭೆಯ(Kumta TMC) ರೆವಿನ್ಯೂ ಇನ್ಸಪೆಕ್ಟರ್(Revenue Inspector) ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡಿದ್ದ ಭಟ್ಕಳ ಮೂಲದ ವೆಂಕಟೇಶ್ ಆರ್. ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾಗುವ ಪೂರ್ವದಲ್ಲಿ ವೆಂಕಟೇಶ ಪತ್ರವೊಂದನ್ನು ಬರೆದಿದ್ದು ಅದರಲ್ಲಿ ತಾವೂ ಅನುಭವಿಸಿದ ಎದುರಿಸಿದ ಅವಮಾನಗಳ ಬಗ್ಗೆ ಬರೆದಿದ್ದಾರೆ. ಪುರಸಭೆ ಮುಖ್ಯಾಧಿಕಾರಿ(TMC Chief Officer) ಎಂ ಆರ್ ಸ್ವಾಮಿ ಕಟ್ಟಡವೊಂದರ ಅಧಿಕೃತ ಬಿ ಖಾತೆಯನ್ನು ಎ ಖಾತೆಗೆ ಬದಲಿಸಲು ಒತ್ತಡಗಳನ್ನು ಹಾಕುತ್ತಿದ್ದರು. 4 ಲಕ್ಷ ರು. ಹಣದ ಬೇಡಿಕೆ, ಅಶ್ಲೀಲ ಪದ ಬಳಕೆ, ಮಾನಸಿಕ ಹಿಂಸೆ, ಜಾತಿ-ನಿಂದನೆಗಳನ್ನ ಮಾಡಿದ್ದರು ಎಂದು ಪತ್ರದಲ್ಲಿ ವೆಂಕಟೇಶ ಉಲ್ಲೇಖಿಸಿದ್ದಾರೆ.
ಶಾಸಕ ದಿನಕರ ಶೆಟ್ಟಿ ಅವರ ಕೆಲಸ ಎಂದು ಮುಖ್ಯಾಧಿಕಾರಿ ಬಾರೀ ಒತ್ತಡ ಇದೆ, ಎಂದು ಹೇಳಿ ಇಲ್ಲಸಲ್ಲದ ಮಾತುಗಳನ್ನ ಹೇಳಿ ಎಲ್ಲರ ಮುಂದೆ ಹೀಯಾಳಿಸುತ್ತಿದ್ದರು. ವಿಷಯವನ್ನ ಬರೆದ ವೆಂಕಟೇಶ ಆ ಪತ್ರವನ್ನ ಸಿಬ್ಬಂದಿಗಳಿರುವ ಗ್ರೂಫಿಗೆ ಕಳಿಸಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಕಿರುಕುಳ ದೌರ್ಜನ್ಯ ಖಂಡಿಸಿ ಕುಮಟಾ ಪುರಸಭೆ ಸಿಬ್ಬಂದಿಗಳು ಅಧ್ಯಕ್ಷರಿಗೆ ಮನವಿ ನೀಡಿದ್ದಾರೆ. ಇಲ್ಲಿಂದ ಮುಖ್ಯಾಧಿಕಾರಿಯನ್ನ ವರ್ಗಾಯಿಸಬೇಕೆಂದು ಆಗ್ರಹಿಸಿದ್ದಾರೆ.
ಸರ್ಕಾರದ ಸೇವೆಯಲ್ಲಿರುವ ಅಧಿಕಾರಿ ತಮ್ಮ ಕೆಳಗಿನ ಅಧಿಕಾರಿಗಳಿಗೆ ಈ ರೀತಿಯಾಗಿ ಅವಮಾನ, ಒತ್ತಡ ತರುತ್ತಿರುವುದಕ್ಕೆ ಖಂಡನೆ ವ್ಯಕ್ತವಾಗಿದೆ. ಕಿರುಕುಳ ನೀಡಿದ ಮುಖ್ಯಾಧಿಕಾರಿ ಮೇಲೆ ಯಾವ ಕ್ರಮ ಕೈಗೊಳ್ಳುತ್ತೋ ಕಾದು ನೋಡಬೇಕು.
ಇದನ್ನು ಓದಿ : ಶಾಲಾ ಆವರಣದಲ್ಲಿ ವಾಮಾಚಾರ. ಯುವತಿಯಿಂದ ಕೃತ್ಯ. ಎಸ್ಕೇಪ್ ಆಗಲು ಪ್ರಯತ್ನ.