ಜೊಯಿಡಾ(Joida) : ನಮ್ಮ ಸಂಸ್ಕೃತಿ ಪದ್ದತಿಗಳು ಉಳಿಯಬೇಕು ಎಂದರೆ ನಾವು ದುಡಿದ ಹಣದಲ್ಲಿ ಸ್ವಲ್ಪವಾದರೂ ದೇವಸ್ಥಾನಗಳಿಗೆ ಹಾಗೂ ಈ ರೀತಿಯ ಸಾಂಸ್ಕೃತಿಕ ಕಲಾ ಸೇವೆ ಮಾಡುವ ಸಂಘ ಸಂಸ್ಥೆಗಳಿಗೆ ಸಹಾಯ ಮಾಡುವ ಮನಸ್ಸು ಮಾಡಬೇಕು. ನಮ್ಮೂರಿನ ಮಹಿಳೆಯರೇ ಸೇರಿಕೊಂಡು ಹಲವಾರು ಕಲಾವಿಧರನ್ನ ಗೌರವಿಸುವ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ವೇಧಿಕೆಯ ಅವಕಾಶ ನೀಡಿ ಅವರಲ್ಲಿನ ಪ್ರತಿಭೆಗಳ ಬೆಳವಣಿಗೆಗೆ ಸಹಕಾರಿಯಾಗುವಂತ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತಸದ ವಿಷಯ ಎಂದು ಸೋಮೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷ ಮಂಜುನಾಥ ಭಾಗ್ವತ್ ಹೇಳಿದರು.
ಅವರು ಪ್ರೇರಣಾ ಸಂಸ್ಥೆ (ರಿ) ಗುಂದ ಇವರು ತಾಲೂಕಿನ ನಂದಿಗದ್ದಾದಲ್ಲಿ ನಡೆದ ಪ್ರೇರಣಾ ೧೫ರ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕ.ಸಾ.ಪ ತಾಲೂಕಾಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿ, ನಮ್ಮ ಕಲೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿರುತ್ತಿರುವ ಸಂಸ್ಥೆ ಜನ ಮನ್ನಣೆ ಗಳಿಸಿ 15 ವರ್ಷದ ಸಂಬ್ರಮದಲ್ಲಿ ಇರುವುದು ಖುಷಿಯ ವಿಚಾರ. ಮಹಿಳೆಯರೇ ಇಲ್ಲಿ ಒಂದು ಕಡೆ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಹೆಸರು ಗಳಿಸುವುದು ಸಾಧನೆ ಎನ್ನಬೇಕು. ಪ್ರೇರಣಾ ಸಂಸ್ಥೆಯ ಸರ್ವರಿಗೂ ಈ ಸಂದರ್ಬದಲ್ಲಿ ಅಭಿನಂದನೆ ತಿಳಿಸುತ್ತೇನೆ ಎಂದರು.
ಗ್ರಾ.ಪಂ ಸದಸ್ಯೆ ಶೋಭಾ ಎಲ್ಲೆಕರ ಮಾತನಾಡಿ, ಪ್ರೇರಣಾ ಸಂಸ್ಥೆ ನಾಟಕ, ಜಾನಪದ, ಕೀರ್ತನೆಗಳಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇಷ್ಟು ವರ್ಷಗಳ ಕಾಲ ಜನರ ಮನ ಗೆದ್ದಿದೆ ಎಂದರು.
ಗ್ರಾ.ಪಂ ಸದಸ್ಯ ದವಳೋ ಸಾವರಕರ ಮಾತನಾಡಿ, ನಮ್ಮೂರಿನ ಈ ಸಂಸ್ಥೆ ಕಲಾವಿಧರನ್ನ ಬೆಳೆಸುವ ಮೂಲಕ, ಪ್ರೋತ್ಸಾಹಿಸುವ ಮೂಲಕ ಯಶಸ್ಸಿನತ್ತ ದಾಪುಗಾಲು ಇಡುತ್ತಿದೆ ಎಂದರು.
ಹಿರಿಯ ಯಕ್ಷಗಾನ ಕಲಾವಿಧರಾದ ಗೋಪಾಲ ಆಚಾರ್ಯ ತೀರ್ಥಹಳ್ಳಿ ಮತ್ತು ಯಕ್ಷಮಾಣಿಕ್ಯ ಚಿಂತನಾ ಮಾಳಕೋಡ ಇವರನ್ನ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಂದಿಗದ್ದಾ ಗ್ರಾ.ಪಂ ಉಪಾಧ್ಯಕ್ಷೆ ದಾಕ್ಷಾಯಿಣಿ ದಾನಶೂರ, ಜೊಯಿಡಾ ಪ್ರೆಸ್ ಅಧ್ಯಕ್ಷ ಗಿರೀಶ ಪಾಟೀಲ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ, ಯಕ್ಷಮಾಣಿಕ್ಯ ಚಿಂತನಾ ಹೇಗಡೆ ಮಾಳಕೋಡ, ಪ್ರಾ.ಶೀ.ಸಂಘದ ಅಧ್ಯಕ್ಷ ಯಶವಂತ ನಾಯ್ಕ, ಪ್ರೇರಣಾ ಸಂಸ್ಥೆಯ ಅಧ್ಯಕ್ಷೆ ಸುಕನ್ಯಾ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.
ಅಮರ ಭಾಗ್ವತ ಮತ್ತು ಮಹಿಮಾ ಭಾಗ್ವತ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಮಾಣಿಕ್ಯ ಚಿಂತನಾ ಮಾಳಕೋಡ ಇವರ ಗಾನ ಸಾರತ್ಯದಲ್ಲಿ ಮಹೇಂದ್ರ ಶಪಥ ಯಕ್ಷಗಾನ ನಡೆಯಿತು.
ಇದನ್ನು ಓದಿ : ಆರು ಎಸೆತಕ್ಕೆ ಆರು ವಿಕೆಟ್