ಕಾರವಾರ : ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಎಲ್ಲಾ ಕ್ಷೇತ್ರಗಳಲ್ಲೂ ಲೀಡ್ ಸಿಕ್ಕಿದರೇ ಕಾಂಗ್ರೆಸ್ ಮುನ್ನಡೆ ಗಳಿಸಲು ವಿಫಲವಾಗಿದೆ.
ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ಬಾರೀ ಅಂತರಗಳಿಂದ ಗೆದ್ದಿದ್ದಾರೆ. ವಿಧಾನಸಭಾ ಕ್ಷೇತ್ರವಾರು ನೋಡಿದರೆ ಕಾಗೇರಿ ಮತ್ತು ಅಂಜಲಿ ನಿಂಬಾಳ್ಕರ್ ಪಡೆದ ಮತಗಳು ಈ ಕೆಳಗಿನಂತಿವೆ.
ಖಾನಾಪುರ ಕ್ಷೇತ್ರದಲ್ಲಿ ಕಾಗೇರಿಗೆ 107978 ಮತಗಳು ಬಿದ್ದರೆ ಅಂಜಲಿ ನಿಂಬಾಳ್ಕರ್ ಗೆ 48148 ಮತಗಳು. ( ಬಿಜೆಪಿಗೆ ಹೆಚ್ಚು 59830 ಮತಗಳು ).
ಕಿತ್ತೂರು ಕ್ಷೇತ್ರದಲ್ಲಿ ಕಾಗೇರಿಗೆ 92445, ಅಂಜಲಿ ನಿಂಬಾಳ್ಕರ್ ಗೆ 56203 ಮತಗಳು. ( ಬಿಜೆಪಿಗೆ ಹೆಚ್ಚು 36242 ಮತಗಳು ).
ಹಳಿಯಾಳ ಕ್ಷೇತ್ರದಲ್ಲಿ ಕಾಗೇರಿಗೆ 83426, ಅಂಜಲಿ ನಿಂಬಾಳ್ಕರ್ ಗೆ 54546 ಮತಗಳು. ( ಬಿಜೆಪಿಗೆ ಹೆಚ್ಚು 28880 ಮತಗಳು ).
ಕಾರವಾರ ಕ್ಷೇತ್ರದಲ್ಲಿ ಕಾಗೇರಿಗೆ 113317, ಅಂಜಲಿ ನಿಂಬಾಳ್ಕರ್ ಗೆ 47889 ಮತಗಳು. ( ಬಿಜೆಪಿಗೆ ಹೆಚ್ಚು 65428 ಮತಗಳು ).
ಕುಮಟಾ ಕ್ಷೇತ್ರದಲ್ಲಿ ಕಾಗೇರಿಗೆ 97928, ಅಂಜಲಿ ನಿಂಬಾಳ್ಕರ್ ಗೆ 44435 ಮತಗಳು. ( ಬಿಜೆಪಿಗೆ ಹೆಚ್ಚು 53493 ಮತಗಳು ).
ಭಟ್ಕಳ ಕ್ಷೇತ್ರದಲ್ಲಿ ಕಾಗೇರಿಗೆ 100288, ಅಂಜಲಿ ನಿಂಬಾಳ್ಕರ್ ಗೆ 67885 ಮತಗಳು. ( ಬಿಜೆಪಿಗೆ ಹೆಚ್ಚು 32403 ಮತಗಳು ).
ಶಿರಸಿ ಕ್ಷೇತ್ರದಲ್ಲಿ ಕಾಗೇರಿಗೆ 100052 ಅಂಜಲಿ ನಿಂಬಾಳ್ಕರ್ ಗೆ 60124 ಮತಗಳು. ( ಬಿಜೆಪಿಗೆ ಹೆಚ್ಚು 39928 ಮತಗಳು ).
ಯಲ್ಲಾಪುರ ಕ್ಷೇತ್ರದಲ್ಲಿ ಕಾಗೇರಿಗೆ 82453, ಅಂಜಲಿ ನಿಂಬಾಳ್ಕರ್ ಗೆ 64066 ಮತಗಳು. ( ಬಿಜೆಪಿಗೆ ಹೆಚ್ಚು 18387 ಮತಗಳು ).
ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧೆಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಒಟ್ಟು 782495 ಮತ ಗಳಿಸಿದರೆ, ಕಾಂಗ್ರೆಸ್ ನ ಅಂಜಲಿ ನಿಂಬಾಳ್ಕರ್ ಒಟ್ಟು 445067 ಮತ ಪಡೆದಿದ್ದಾರೆ. ಒಟ್ಟು 337428 ಮತಗಳ ಅಂತರದಿಂದ ಕಾಗೇರಿ ಗೆಲುವು ಸಾಧಿಸಿದ್ದಾರೆ.