ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಕಟ್ಟಡ ಕಾಮಗಾರಿಯ ವೇಳೆ ತಾತ್ಕಾಲಿಕ ಲಿಫ್ಟ್ ಕುಸಿದ(Lift Collapse) ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟ(Labours Died) ಧಾರುಣ ಘಟನೆ ಮುರ್ಡೇಶ್ವರದಲ್ಲಿ ಸಂಭವಿಸಿದೆ.
ಮೃತರನ್ನು ಮುರ್ಡೇಶ್ವರ ಬಸ್ತಿಯ(Murdeshwar Basti) ಪ್ರಭಾಕರ್ ಮುತಪ್ಪ ಶೆಟ್ಟಿ (48) ಹಾಗೂ ಕುಂದಾಪುರ(Kundapur) ತಾಲೂಕಿನ ಗೋಳಿಹೊಳೆಯ ಬಾಬಣ್ಣ ಪೂಜಾರಿ (45) ಎಂದು ಗುರುತಿಸಲಾಗಿದೆ.
ಮುರ್ಡೇಶ್ವರದ ಕಾಮತ್ ಯಾತ್ರಿ(Murdeshwar Kamat Yatri) ನಿವಾಸದ ಮಾಲೀಕ ವೆಂಕಟದಾಸ ಕಾಮತ್ ಅವರ ಹೊಸ ಕಟ್ಟಡ ಕಾಮಗಾರಿಯಲ್ಲಿ ಮಿನಿ ಲಿಫ್ಟ್ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಈ ದುರಂತ ನಡೆದಿದೆ. ಕಟ್ಟಡದ ಮೇಲ್ಮಹಡಿಗಳಿಗೆ ವಸ್ತುಗಳನ್ನು ಸಾಗಿಸಲು ತಾತ್ಕಾಲಿಕ ಲಿಫ್ಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಲಿಫ್ಟ್ನ ಸೆಫ್ಟಿ ಲಾಕ್ ಹಾಳಾಗಿ ಕೇಬಲ್ ಕಟ್ ಆಗಿದ್ದರಿಂದ, ಇಬ್ಬರು ಕಾರ್ಮಿಕರು ಇದ್ದ ಲಿಫ್ಟ್ ಕೆಳಕ್ಕೆ ಬಿದ್ದು ನೆಲಕ್ಕುರುಳಿದೆ. ಪರಿಣಾಮವಾಗಿ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು.
ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ(Bhatkal Government Hospital) ಕರೆದೊಯ್ಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ(Manipal Kasturba Hospital) ವರ್ಗಾಯಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಮುರ್ಡೇಶ್ವರ ಪೊಲೀಸರು(Murdeshwar Pokice) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕನ್ಸ್ಟ್ರಕ್ಷನ್ ಮಿನಿ ಲಿಫ್ಟ್ ತಯಾರಿಕಾ ಸಂಸ್ಥೆ ಹಾಗೂ ಕಟ್ಟಡ ಮಾಲೀಕರಾದ ವೆಂಕಟದಾಸ ಕಾಮತ್ ಅವರ ವಿರುದ್ಧ ಮೃತ ಪ್ರಭಾಕರ್ ಶೆಟ್ಟಿ ಅವರ ಪುತ್ರ ಶ್ರವಣ ಶೆಟ್ಟಿ ದೂರು ದಾಖಲಿಸಿದ್ದಾರೆ. “ಅಪಘಾತಕ್ಕೆ ಸುರಕ್ಷತಾ ಕ್ರಮಗಳ ಕೊರತೆ ಹಾಗೂ ಯಂತ್ರೋಪಕರಣದ ದೋಷವೇ ಕಾರಣ” ಎಂದು ಆರೋಪಿಸಿದ್ದಾರೆ.
ಮುರ್ಡೇಶ್ವರ ಠಾಣೆ(Murdeshwar Station) ಪಿಎಸೈ ಹನುಮಂತ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸ್ಥಳೀಯರು ಹಾಗೂ ಕಾರ್ಮಿಕ ವರ್ಗದಲ್ಲಿ ಆಘಾತ ಮತ್ತು ಶೋಕದ ವಾತಾವರಣವನ್ನು ಉಂಟುಮಾಡಿದೆ.
ಇದನ್ನು ಓದಿ : ಮುರ್ಡೇಶ್ವರ ಮತ್ತು ಭಟ್ಕಳ ಗ್ರಾಮೀಣ ಪೊಲೀಸರ ಕಾರ್ಯಾಚರಣೆ. ಮೂವರ ಮೇಲೆ ಪ್ರಕರಣ.
ಕರ್ತವ್ಯದಲ್ಲಿರುವಾಗ ಬಿಸಿಯೂಟದ ಕೋಣೆಯಲ್ಲಿ ಕುಸಿದು ಬಿದ್ದ ಮಹಿಳೆ ಸಾವು
ದಾರಿ ಸಿಗದೇ ಕಾಡಲ್ಲಿ ನಾಲ್ಕು ದಿನ ಕಳೆದ ವೃದ್ದ ವೈದ್ಯ. ಪತ್ತೆ ಹಚ್ಚಿದ ಪೊಲೀಸ್ ಶ್ವಾನ.
ಅಂದರ್ ಬಾಹರ್ ಆಡಲು ಹೋಗಿ ಸಿಕ್ಕಿ ಬಿದ್ದ ಮೂವರು. ಏಳು ಮಂದಿ ಪರಾರಿ.
ಆರ್ಟಿಐ ಸೋಗಿನಲ್ಲಿ ಕೋಟಿ ರೂ. ಡಿಮ್ಯಾಂಡ್. ಪೊಲೀಸ್ ಆಯುಕ್ತ ನೇತೃತ್ವದ ತಂಡದಿಂದ ಹಲವರ ಬಂಧನ.
